Advertisement

Panemangalore ಹಳೆ ಸೇತುವೆ ಸಾಮರ್ಥ್ಯ ಪರಿಶೀಲನೆಗೆ ಬೇಡಿಕೆ

04:51 PM Aug 22, 2024 | Team Udayavani |

ಬಂಟ್ವಾಳ: ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಶತಮಾನದ ಸೇತುವೆ ಎಂಬ ಹೆಗ್ಗಳಿಕೆಯ ಪಡೆದುಕೊಂಡಿರುವ ಪಾಣೆಮಂಗಳೂರು ಹಳೆಯ(ಉಕ್ಕಿನ) ಸೇತುವೆಯು ಈಗಾಗಲೇ ಶಿಥಿಲಗೊಂಡಿದ್ದು, ಮುಂದಿನ ವಾರ ದ.ಕ.ಜಿಲ್ಲೆಯ ಸೇತುವೆಗಳ ಸಾಮರ್ಥ್ಯ ಪರಿಶೀಲನೆಗೆ ಆಗಮಿಸಲಿರುವ ಬ್ರಿಡ್ಜ್ ಇನ್‌ಸ್ಪೆಕ್ಷನ್‌ ಮಷಿನ್‌(ಸೇತುವೆ ಸಾಮರ್ಥ್ಯ ಪರಿಶೀಲನ ಯಂತ್ರ) ಮೂಲಕ ಉಕ್ಕಿನ ಸೇತುವೆಯ ಸಾಮರ್ಥ್ಯ ಪರಿಶೀಲನೆಗೂ ಪ್ರಯತ್ನಗಳು ನಡೆದಿದೆ.

Advertisement

ಹಿಂದೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿದ್ದ ಉಕ್ಕಿನ ಸೇತುವೆಯು ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಬಂಟ್ವಾಳ ಪುರಸಭೆಗೆ ಹಸ್ತಾಂತರಗೊಂಡಿದೆ. ಸೇತುವೆಯು ಶಿಥಿಲಗೊಂಡಿದೆ ಎಂಬ ಮಾತುಗಳು ಕೇಳಿ ಹಿನ್ನೆಲೆಯಲ್ಲಿ ಪ್ರಾಥಮಿಕ ಪರಿಶೀಲನೆ ನಡೆದು ಘನ ವಾಹನ ಸಂಚಾರ ನಿಷೇಧಿಸುವಂತೆ ಆದೇಶ ಬಂದಿತ್ತು. ಆದರೆ ಎಲ್ಲ ರೀತಿಯ ವಾಹನಗಳು ಸೇತುವೆಯಲ್ಲಿ ನಿರಾತಂಕವಾಗಿ ಸಾಗುತ್ತಿತ್ತು.

ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಮತ್ತೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಗಮಿಸಿ ತಹಶೀಲ್ದಾರ್‌ ಎಸ್‌.ಬಿ.ಕೂಡಲಗಿ ಅವರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸುವಂತೆ ಪುರಸಭೆಗೆ ನಿರ್ದೇಶನ ನೀಡಿದ್ದರು. ಬಳಿಕ ಎರಡೂ ಬದಿಗಳಲ್ಲೂ ಕಬ್ಬಿಣದ ಗಾರ್ಡ್‌ಗಳನ್ನು ಅಳವಡಿಸಿ ಘನ ವಾಹನ ಸಂಚಾರ ನಿಷೇಧಿಸಲಾಗಿತ್ತು.

ವಾಹನ ಸಂಚಾರ ನಿಷೇಧಕ್ಕೆ ನಿರ್ದೇಶನ
ಪ್ರಸ್ತುತ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಸಂಚರಿಸುತ್ತಿದ್ದು, ಆದರೆ ಅವುಗಳ ಸಂಚಾರಕ್ಕೂ ಸೇತುವೆ ಯೋಗ್ಯವಾಗಿದೆಯೇ ಎಂಬುದು ಖಚಿತವಿಲ್ಲ ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಸೇತುವೆಯ ಪರಿಶೀಲನ ಕಾರ್ಯ ನಡೆಯುವವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನೂ ನಿಷೇಧ ಮಾಡುವಂತೆ ಪುರಸಭಾ ಎಂಜಿನಿಯರ್‌ಗೆ ತಹಶೀಲ್ದಾರ್‌ ನಿರ್ದೇಶನ ನೀಡಿದ್ದಾರೆ.

ಸಾಮರ್ಥ್ಯ ಪರೀಕ್ಷೆಗೆ ಪತ್ರ
ಪಾಣೆಮಂಗಳೂರು ಹಳೆಯ ಸೇತುವೆಯನ್ನೂ ಯಂತ್ರದ ಮೂಲಕ ಪರೀಕ್ಷಿಸಲು ಲೋಕೋಪಯೋಗಿ ಇಲಾಖೆಗೆ ವಿನಂತಿಸಲಾಗಿದ್ದು, ಮುಂದೆ ಅವರಿಗೆ ಪತ್ರ ಬರೆದು ಸಾಮರ್ಥ್ಯ ಪರೀಕ್ಷೆ ಮಾಡಿಕೊಡುವಂತೆ ತಿಳಿಸಬೇಕಿದೆ. ಅಲ್ಲಿಯವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಕೂಡ ಪುರಸಭೆಗೆ ತಿಳಿಸಿದ್ದೇನೆ.
-ಅರ್ಚನಾ ಡಿ.ಭಟ್‌, ತಹಶೀಲ್ದಾರ್‌, ಬಂಟ್ವಾಳ

Advertisement

ಪರಿಶೀಲನೆಗೆ ಪಿಡಬ್ಲ್ಯುಡಿಗೆ ವಿನಂತಿ
ಸೇತುವೆ ಸಾಮರ್ಥ್ಯ ಪರಿಶೀಲನ ಯಂತ್ರವು ಆ. 26ರಂದು ಬೆಂಗಳೂರಿನಿಂದ ದ.ಕ.ಜಿಲ್ಲೆಗೆ ಆಗಮಿಸಿದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಹಳೆಯ ಸೇತುವೆಗಳನ್ನು ಪರಿಶೀಲನ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ತಹಶೀಲ್ದಾರ್‌ ಅರ್ಚನಾ ಡಿ.ಭಟ್‌ ಅವರು ಪಾಣೆಮಂಗಳೂರಿನ ಹಳೆಯ ಸೇತುವೆಯನ್ನೂ ಯಂತ್ರದ

Advertisement

Udayavani is now on Telegram. Click here to join our channel and stay updated with the latest news.

Next