Advertisement
ಉಳಾಯಿಬೆಟ್ಟು ಮೇಲ್ಮನೆ ಬಳಿ ಇರುವ ಸೇತುವೆ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು. ಮಂಗಳೂರು, ವಾಮಂಜೂರು, ಗುರುಪುರ ಪ್ರದೇಶಗಳಿಗೆ ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು ಗ್ರಾಮಸ್ಥರಿಗೆ ಪ್ರಮುಖ ರಸ್ತೆ ಹಾಗೂ ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರು ಘನ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಮಾಡಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕಿರು ಸೇತುವೆಯ ಸಮೀಪದಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡಲು ಅವಕಾಶವಿದೆ. ಇಲ್ಲಿ ಶಾಶ್ವತ ಕಿರುಸೇತುವೆ ಅಥವಾ ಮೋರಿ ಹಾಕಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬಹುದಿತ್ತು.
Related Articles
Advertisement
ವಾಹನ ಸಂಚಾರಕ್ಕೆ ಶೀಘ್ರ ಬದಲಿಯಾಗಿ ಮೋರಿ ಇಲ್ಲವೇ ಕಿರು ಸೇತುವೆ ಮಾಡಿ ಎಂದು ಆಗ್ರಹಿಸಿರುವ ಜನರು, ಬೇಡಿಕೆಗೆ ಕಿವಿಗೊಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
12 ಸ್ಕೂಲ್ ಬಸ್ ಬರುತ್ತಿತ್ತುಈ ಕಿರುಸೇತುವೆ ದಾಟಿ ಊರಿಗೆ 12 ಶಾಲಾ ಬಸ್‌ಗಳು ಬರುತ್ತಿದ್ದವು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದವು. ಅಲ್ಲದೆ 3 ಖಾಸಗಿ ಬಸ್ ಹಾಗೂ 2 ಸರಕಾರಿ ಬಸ್ ಮಂಗಳೂರಿಗೆ ಪ್ರತಿನಿತ್ಯ ಪ್ರಯಾಣಿಸುತ್ತಿದ್ದವು. ಈಗ ಬೇರೆ ವಾಹನಗಳನ್ನು ನಂಬಿ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಘನ ವಾಹನಗಳಿಗೆ ನಿಷೇಧವಿದ್ದರೂ ಮರಳು, ಮಣ್ಣು, ಕೆಂಪು ಕಲ್ಲು, ಕಪ್ಪು ಕಲ್ಲು, ಜಲ್ಲಿಕಲ್ಲು ಸಾಗಿಸುವ ಎರಡು ಯುನಿಟಿನ ಟಿಪ್ಪರ್‌ಗಳು ಈ ಕಿರುಸೇತುವೆಯಲ್ಲಿ ದಿನನಿತ್ಯ ಸಾಗುತ್ತಿವೆ! ಬಸ್‌ಗಳಿಗೆ ಮಾತ್ರ ನಿಷೇಧ ಮಾಡಲಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.