Advertisement
ಪನೀರ್ ನಿಂದ ಮಾಡಿದಂತಹ ಖಾದ್ಯಗಳು ತುಂಬಾ ರುಚಿ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯದು.ಪನೀರ್ ನಲ್ಲಿ ಅಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲವಾಗುತ್ತದೆ ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ. ಇದು ದೇಹದಲ್ಲಿ ಇನ್ಸುಲಿನ್ ಗಳ ಉತ್ಪತ್ತಿಗೆ ಸಹಕಾರಿಯಾಗಿದೆ. ಬೆನ್ನು ನೋವು ಕಡಿಮೆ ಮಾಡುತ್ತದೆ ಅಲ್ಲದೇ ದೇಹದಲ್ಲಿ ಪ್ರೊಟೀನ್ ಕಡಿಮೆಯಾಗದಂತೆ ಇದು ನೋಡಿಕೊಳ್ಳುತ್ತದೆ.
ಬೇಕಾಗುವ ಸಾಮಗ್ರಿಗಳು
ಪನೀರ್1/2 ಕೆ.ಜಿ.,ತಂದೂರಿ ಮಸಾಲ ಪುಡಿ 2 ಚಮಚ,ಜೀರಿಗೆ ಪುಡಿ 2 ಚಮಚ, ಕಡ್ಲೆ ಹಿಟ್ಟು 2 ಚಮಚ, ಅರಶಿನ ಪುಡಿ1/4 ಚಮಚ, ಗರಂ ಮಸಾಲ ಪುಡಿ 1/2 ಚಮಚ, ಕಾಳು ಮೆಣಸು 1/4 ಚಮಚ, ತೆಂಗಿನೆಣ್ಣೆ 2 ಚಮಚ, ನೀರು ಬಸಿದ ದಪ್ಪ ಮೊಸರು 1 ಕಪ್,ಮೆಣಸಿನ ಪುಡಿ 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ,ಲಿಂಬೆ ರಸ 1 ಚಮಚ, ಅಚj ಖಾರದ ಪುಡಿ 1 ಚಮಚ,ದೊಣ್ಣೆ ಮೆಣಸು ಒಂದು ಇಂಚು ಗಾತ್ರದ ಹೋಳುಗಳು 6 ರಿಂದ 8,ಈರುಳ್ಳಿ ಒಂದು ಇಂಚು ಗಾತ್ರದ ಹೋಳುಗಳು 6 ರಿಂದ 8,ಟೊಮೆಟೋ ಒಂದು ಇಂಚು ಗಾತ್ರದ ಹೋಳುಗಳು 6ರಿಂದ 8.ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಪನೀರನ್ನು 1 ಇಂಚು ಚೌಕಾಕಾರದ ಹೋಳುಗಳಾಗಿ ತುಂಡು ಮಾಡಿ ಇಟ್ಟುಕೊಳ್ಳಿ. ತದನಂತದ ಒಂದು ಪಾತ್ರೆಯಲ್ಲಿ ಮೊಸರನ್ನು ಹಾಕಿ ತಂದೂರಿ ಮಸಾಲ ಪುಡಿ, ಕಡ್ಲೆಹಿಟ್ಟು,ಅರಶಿನ ಪುಡಿ,ಗರಂ ಮಸಾಲ ಪುಡಿ, ಕಾಳು ಮೆಣಸಿನ ಪುಡಿ ಜೀರಿಗೆ ಪುಡಿ,ಖಾರದ ಪುಡಿ,ಲಿಂಬೆ ರಸ,ತೆಂಗಿನೆಣ್ಣೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ ಇಟ್ಟುಕೊಳ್ಳಿ.
Advertisement
ನಂತರ ಪನೀರ್,ದೊಣ್ಣೆ ಮೆಣಸಿನ ಹೋಳು,ಟೊಮೆಟೋ ಹೋಳು ಮತ್ತು ಈರುಳ್ಳಿ ಹೋಳಗಳನ್ನು ಮಿಶ್ರಣದೊಂದಿಗೆ ಹದವಾಗಿ ಬೆರೆಸಿಕೊಳ್ಳಿ. ಸುಮಾರು ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ಉದ್ದನೆಯ ಕಡ್ಡಿಗೆ 1 ಈರುಳ್ಳಿ ಹೋಳು,ಆನಂತರ 1 ಪನೀರ್‌ತುಂಡು,ಆನಂತರ 1 ದೊಣ್ಣೆ ಮೆಣಸಿನ ಹೋಳು 1 ಪನೀರ್ ತುಂಡು ಆನಂತರ ಟೊಮೆಟೋ ಹೋಳು ಹೀಗೆ 2 ಜೊತೆ ಪೋಣಿಸಿ. ಹಾಗೆಯೇ ಮಿಕ್ಕ ಹೋಳುಗಳನ್ನು ಈ ರೀತಿಯಲ್ಲಿ ಪೋಣಿಸಿರಿ. ನಂತರ ಓವನ್ ನಲ್ಲಿ 10 ನಿಮಿಷಗಳವವರೆಗೆ ಬೇಯಿಸಿ(ಪನೀರ್ ಮೃದುವಾಗುವವರೆಗೆ) ಇದನ್ನು ತಾವದಲ್ಲಿಯೂ ಮಾಡಬಹುದು. ಬಿಸಿ-ಬಿಸಿಯಾದ ಪನೀರ್ ಟಿಕ್ಕಾ ಸವಿಯಲು ಸಿದ್ಧ. ಇದು ಪುದೀನ ಚಟ್ನಿ ಮತ್ತು ಸಾಸ್ ನೊಂದಿಗೆ ತಿನ್ನಲು ರುಚಿಕರವಾಗುವುದು.
ಪುದೀನ ಚಟ್ನಿಬೇಕಾಗುವ ಸಾಮಗ್ರಿಗಳು
ಕೊತ್ತಂಬರಿ ಸೊಪ್ಪು 1 ಕಪ್, ಪುದೀನಾ ಸೊಪ್ಪು 1 ಕಪ್ ,3 ಮೆಣಸಿ ಕಾಯಿ, ಮೊಸರು 1 ಕಪ್, ಜೀರಿಗೆ 1/2 ಚಮಚ ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಚಟ್ನಿಗೆ ಎಂದಿರುವ ಸಾಮಗ್ರಿಗಳೆಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ಆದಷ್ಟು ಕಡಿಮೆ ನೀರನ್ನು ಸೇರಿಸಿ ರುಬ್ಬಿರಿ.