Advertisement
ಪನೀರ್ ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಫೈಬರ್ ಗುಣ ಹೊಂದಿರುವುದರಿಂದ ಆರೋಗ್ಯಕ್ಕೂ ಇದು ಉತ್ತಮ.
ಪನೀರ್ ಕ್ಯೂಬ್ಸ್-500 ಗ್ರಾಂ, ಅರಿಶಿನ ಪುಡಿ-1 ಚಮಚ, ಕಾರ್ನ್ ಫ್ಲೋರ್- 3 ಚಮಚ, ಅಚ್ಚಖಾರದ ಪುಡಿ -2 ಚಮಚ
ಕಡ್ಲೆ ಹಿಟ್ಟು-1 ಕಪ್, ಅಡುಗೆ ಸೋಡಾ-1 ಚಮಚ, ಚಾಟ್ ಮಸಾಲ-ಸ್ವಲ್ಪ, ಕಸೂರಿ ಮೇಥಿ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ
ಓಂಕಾಳು-1 ಚಮಚ, ಎಣ್ಣೆ-ಕರಿಯಲು, ಉಪ್ಪು- ರುಚಿಗೆ ತಕ್ಕಷ್ಟು.
Related Articles
ಮೊದಲಿಗೆ ಒಂದು ಬೌಲ್ ಗೆ ಪನೀರ್ ಕ್ಯೂಬ್ಸ್ ಅನ್ನು ಹಾಕಿ ಅದಕ್ಕೆ ಅರಿಶಿನ ಪುಡಿ, ಒಂದು ಚಮಚದಷ್ಟು ಅಚ್ಚಖಾರದ ಪುಡಿ, ಚಾಟ್ ಮಸಾಲ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬೌಲ್ಗೆ ಒಂದು ಕಪ್ನಷ್ಟು ಕಡ್ಲೆಹಿಟ್ಟು ಮತ್ತು ಕಾನ್ ಫ್ಲೋರ್ನ್ನು ಹಾಕಿ, ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ, ಅಚ್ಚಖಾರದ ಪುಡಿ, ಅಡುಗೆ ಸೋಡಾ, ಓಂಕಾಳು, ಕಸೂರಿ ಮೇಥಿ, ಸಣ್ಣ ಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
Advertisement
ತದನಂತರ ಮೊದಲೇ ಮಾಡಿಟ್ಟ ಪನೀರ್ ಕ್ಯೂಬ್ಸ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಅದ್ದಿರಿ. ಬಳಿಕ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಅದಕ್ಕೆ ಮಾಡಿಟ್ಟ ಪನೀರ್ ಅನ್ನು ಹಾಕಿ ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿಕೊಂಡು ಟೊಮೆಟೋ ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿಯಾದ ಪನೀರ್ ಪಕೋಡಾ ಸವಿಯಲು ಸಿದ್ಧ.