Advertisement

ಮಕ್ಕಳಿಗಾಗಿ ಪೌಷ್ಟಿಕಾಂಶ ಪುಟ್ಟ ಕೈಪಿಡಿ ಬಿಡುಗಡೆ

09:26 AM Nov 19, 2019 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡುವ ಕುರಿತಂತೆ ಹಿರಿಯರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್, ‘ಫ್ರಮ್‌ ಉತ್ತಪ್ಪಮ್‌ ಟು ಸ್ಟ್ರೌಟೆಡ್‌ ದಾಲ್‌ ಪರಾಠ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದೆ.

Advertisement

20 ರೂ. ಮುಖಬೆಲೆ ಹೊಂದಿರುವ ಈ ಪುಸ್ತಕದಲ್ಲಿ ಉಪ್ಪಿಟ್ಟಿನಿಂದ ಹಿಡಿದು, ಪನೀರ್‌ ಕಾಠಿ ರೋಲ್‌, ಅವಲಕ್ಕಿ ಒಗ್ಗರಣೆ ಮುಂತಾದ ರುಚಿಯಾದ ಉಪಾಹಾರಗಳನ್ನು ತಯಾರಿಸುವ ರೀತಿ, ಅದರಲ್ಲಿನ ಪೌಷ್ಟಿಕಾಂಶ, ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಕೊಬ್ಬು, ನಾರಿನ ಅಂಶ, ಕಬ್ಬಿಣದ ಅಂಶ, ವಿಟಮಿನ್‌ ಸಿ, ಕ್ಯಾಲ್ಸಿಯಂನ ವಿವರಣೆ ನೀಡಲಾಗಿದೆ.

ಭಾರತದಲ್ಲಿ ಶೇ. 35 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಹದಿಹರೆಯದವರಲ್ಲಿ ಶೇ. 40 ಬಾಲಕರು, ಶೇ. 18ರಷ್ಟು ಬಾಲಕಿಯರಲ್ಲೂ ಈ ಸಮಸ್ಯೆಯಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರಕಾರ, 2016-18ರ ನಡುವೆ ನಡೆಸಿದ್ದ ನ್ಯಾಷನಲ್‌ ನ್ಯೂಟ್ರಿಷನ್‌ ಸರ್ವೇ ವರದಿಯಲ್ಲಿ ಕೆಲವು ಆಹಾರಗಳ ಮಾರ್ಗ ಸೂಚಿ ನೀಡಲಾಗಿದ್ದು, ಅದರ ಆಧಾರದಲ್ಲಿ ಈ ಪುಸ್ತಕ ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next