Advertisement

ರಾಹುಲ್‌ ಬರ್ತ್‌ಡೇಗೆ ಪಾಂಡ್ಯ ವಿಶ್‌

09:47 AM Apr 19, 2019 | Sriram |

ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರಿಗೆ ಜನ್ಮದಿನದ ಸಡಗರ. ಗುರುವಾರ ಅವರು 27ರ ಹರೆಯಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಅವರ ದೋಸ್ತ್ ಹಾರ್ದಿಕ್‌ ಪಾಂಡ್ಯ ಶುಭ ಕೋರಿ ಹಾರೈಸಿದ್ದಾರೆ.

Advertisement

“ಏನೇ ಆಗಲಿ, ನಾವು ಆಜೀವ ಸಹೋದರರು. ಲವ್‌ ಯೂ ಬ್ರದರ್‌. ಹ್ಯಾಪ್ಪಿ ಬರ್ತ್‌ಡೇ. ಈ ವರ್ಷ ನಮ್ಮದಾಗಿರಲಿ…’ ಎಂದು ಹಾರ್ದಿಕ್‌ ಪಾಂಡ್ಯ ಇನ್‌ಸ್ಟಾಗ್ರಾಮ್‌ ಮೂಲಕ ಶುಭ ಹಾರೈಸಿದ್ದಾರೆ.
ಐಪಿಎಲ್‌ನಲ್ಲಿ ಇವರಿಬ್ಬರೂ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದು, ಭಾರತದ ವಿಶ್ವಕಪ್‌ ತಂಡದಲ್ಲಿ ಒಟ್ಟಿಗೇ ಆಡುವ ಅವಕಾಶ ಪಡೆದಿದ್ದಾರೆ.

ಟೆಲಿವಿಷನ್‌ ಕಾರ್ಯಕ್ರಮವೊಂದರಿಂದ ವಿವಾದಕ್ಕೆ ಸಿಲುಕಿದ್ದ ಇವರಿಬ್ಬರೂ ಸ್ವಲ್ಪ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಪಾಂಡ್ಯ ಅವರ ಈ ಹಾರೈಕೆ ಎಲ್ಲರ ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next