ಮುಂಬೈ: ಭಾರತದ 2011 ವಿಶ್ವಕಪ್ ಹೀರೋ ಜಹೀರ್ ಖಾನ್ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ಆಲ್ ರೌಂಡರ್ ಪೇಚಿಗೆ ಸಿಲಿಕಿದ್ದಾರೆ. ಅಷ್ಟಕ್ಕೂ ಲಂಡನ್ ಆಸ್ಪತ್ರೆಯಲ್ಲಿರುವ ಹಾರ್ದಿಕ್ ಪಾಂಡ್ಯಾ ಮಾಡಿದ್ದೇನು ಗೊತ್ತಾ? ಮುಂದೆ ಓದಿ.
ಇಂದು (ಮಂಗಳವಾರ) ಮಾಜಿ ವೇಗಿ ಜಹೀರ್ ಖಾನ್ ಅವರ ಹುಟ್ಟುಹಬ್ಬ. 41ರ ವಸಂತಕ್ಕೆ ಕಾಲಿಟ್ಟ ಜಹೀರ್ ಗೆ ಕ್ರಿಕೆಟ್ ವಲಯ ಶುಭಾಶಯ ಕೋರಿದೆ. ಹಾರ್ದಿಕ್ ಪಾಂಡ್ಯಾ ಕೂಡಾ ವಿಶ್ ಮಾಡಿದ್ದು, ಆದರೆ ಆ ವಿಶ್ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.
ಹಾರ್ದಿಕ್ ಪಾಂಡ್ಯಾ ವಿಡಿಯೋ ತುಣುಕೊಂದನ್ನು ಅಪ್ಲೋಡ್ ಮಾಡಿ ಶುಭಾಶಯ ಕೋರಿದ್ಧಾರೆ. ಜಹೀರ್ ಖಾನ್ ಅವರ ಎಸೆತವನ್ನು ಹಾರ್ದಿಕ್ ಪಾಂಡ್ಯಾ ಸಿಕ್ಸರ್ ಹೊಡೆಯುವ ವಿಡಿಯೋವನ್ನು ಹಾರ್ದಿಕ್ ಹಂಚಿಕೊಂಡು ಹಿರಿಯ ಆಟಗಾರನಿಗೆ ವಿಶ್ ಮಾಡಿದ್ದಾರೆ. ಹೀಗಾಗಿ ಪಾಂಡ್ಯಾ ವಿಶ್ ಮಾಡುವ ನೆಪದಲ್ಲಿ ಜಹೀರ್ ಗೆ ಅವಮಾನ ಮಾಡಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.