ಪ್ರಕಟಿಸಿದರು.
Advertisement
ಜ. 12ರಂದು ಪ್ರಾರಂಭವಾಗಲಿರುವ 24ನೇ ವರ್ಷದ “ಆಳ್ವಾಸ್ ವಿರಾಸತ್ -2018′ ಮೂರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ 1 ಲಕ್ಷ ರೂ. ಗೌರವಧನ ಸಹಿತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬನಾರಸ್ ಘರಾನಾ ಸಂಗೀತ ವಿದ್ವಾಂಸ ಪಂ| ಹನುಮಾನ್ ಪ್ರಸಾದ್ ಹಾಗೂ ಮಾವ ಪಂ| ಗೋಪಾಲ್ ಮಿಶ್ರಾ ಅವರ ಗರಡಿಯಲ್ಲಿ ಪಳಗಿರುವ ರಾಜನ್ ಸಾಜನ್ ಮಿಶ್ರಾ ಸಹೋದರರು ಪಾರಂಪರಿಕ ಸಂಗೀತದೊಂದಿಗೆ ಸಮಕಾಲೀನ ಸಂಗೀತ ರಸಧಾರೆಗಳ ಬೆಸೆಯುವಿಕೆಯಿಂದ ಪ್ರೇಕ್ಷಕರಲ್ಲಿ ಹೊಸ ಅನುಭೂತಿ ಮೂಡಿಸುವಲ್ಲಿ ಸಾರ್ಥಕತೆ ಕಂಡವರು. ಸಂಗೀತ ಕ್ಷೇತ್ರದ ಸಾಧನೆಗಾಗಿ ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ, ತಾನ್‌ಸೇನ್, ಓಂಕಾರ್‌ನಾಥ್ ಥಾಕುರ್, ಕಾಶಿ ಗೌರವ, ಯಶ ಭಾರತಿಯೇ ಮೊದಲಾದ ಪ್ರಶಸ್ತಿಗಳೊಂದಿಗೆ ವಿಶೇಷವಾಗಿ ಅಮೆರಿಕದ ಬಾಲ್ಟಿಮೋರಾ ಪಟ್ಟಣದ ಗೌರವ ಪೌರ ಪ್ರತಿನಿಧಿತ್ವವೂ ಒಲಿದು ಬಂದಿದೆ ಎಂದು ಅವರು ತಿಳಿಸಿದರು.