Advertisement

ಮೇ ತಿಂಗಳೊಳಗೆ ನೀರಾವರಿ ಕಾಮಗಾರಿ ಪೂರ್ಣ

03:40 PM Feb 09, 2021 | Team Udayavani |

ಪಾಂಡವಪುರ: ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನಲ್ಲಿ ನಡೆಯುತ್ತಿರುವ ಬಳಘಟ್ಟ ಹಾಗೂ ಶ್ಯಾದನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಮೇ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಣ್ಣನೀರಾವರಿ ಸಚಿವ ಜೆ.ಸಿ.ಮಾಧು ಸ್ವಾಮಿ ತಿಳಿಸಿದರು.

Advertisement

ತಾಲೂಕಿನಲ್ಲಿ ನಡೆಯುತ್ತಿರುವ ಬಳಘಟ್ಟ ಮತ್ತು ಶ್ಯಾದನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಮಾತನಾಡಿ, ಸಣ್ಣನೀರಾವರಿ ಇಲಾಖೆಯಿಂದ ನಡೆಯುತ್ತಿರುವ 51 ಕೆರೆ ತುಂಬಿಸುವ ಯೋಜನೆ, 3500 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರು ಪೂರೈಕೆಗೆ 190 ಕೋಟಿ ವೆಚ್ಚದ ಬಳಘಟ್ಟ ಯೋಜನೆ ಹಾಗೂ 3800 ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರು ಪೂರೈಕೆ ಮತ್ತು 3 ಕೆರೆ ತುಂಬಿಸುವ ಯೋಜನೆ ಮತ್ತು ವಡ್ಡರಹಳ್ಳಿ ಹಳ್ಳದ ಬಳಿ ಕೆರೆ ನಿರ್ಮಿಸುವ 90 ಕೋಟಿ ವೆಚ್ಚದ ಶ್ಯಾದನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿಯು ಮೇ ತಿಂಗಳ ಅಂತ್ಯದಲ್ಲಿ ಪೂರ್ಣಗೊಳಿಸಿ, ರೈತರ ಅನುಕೂಲಕ್ಕಾಗಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕೊರೊನಾದಿಂದ ಯೋಜನೆಗೆ ಹಿನ್ನಡೆ: ಏತ ನೀರಾವರಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವಂತೆ  ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಸಣ್ಣನೀರಾವರಿ ಇಲಾಖೆಯ ಯಾವುದೇ ಯೋಜನೆಯನ್ನು ತಡೆದಿಲ್ಲ. ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯ ಕೆಲವು ಯೋಜನೆಗೆ ಕೊರೊನಾ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಹೋರಾಟದಿಂದ ಸರ್ಕಾರಕ್ಕೆ ತೊಂದರೆಯಿಲ್ಲ: ವಿಧಾನ ಪರಿಷತ್‌ ಚುನಾವಣೆಗಷ್ಟೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದೇವೆ. ಈ ಮೈತ್ರಿ ಪರಿಷತ್‌ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಮುಂದುವರಿಸುವ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ರಾಜ್ಯದಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಕುರುಬರ, ಪಂಚಮಶಾಲಿ ಲಿಂಗಾಯತರ ಹೋರಾಟದಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗಲ್ಲ. ಮೀಸಲಾತಿಗಾಗಿ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಶಿಫಾರಸ್ಸು ಮಾಡುವ ಬಗ್ಗೆ ನಮ್ಮ ಸಿಎಂ ಕ್ರಮ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ನಡೆಯಲ್ಲ ಎಂದು ಹೇಳಿದರು.

ಕೃಷಿ ಚಟುವಟಿಕೆಗೆ ಅನುಕೂಲ: ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಎರಡು ಕಾಮಗಾರಿಯಿಂದ ತಾಲೂಕಿನ ಬಹುತೇಕ ನೀರಾವರಿ ವಂಚಿತ ಪ್ರದೇಶದ ರೈತರಿಗೆ ನೀರು ಪೂರೈಕೆಯಾಗಲಿದೆ. ರೈತರು ಕೃಷಿ ಚಟುವಟಿಕೆ ನಡೆಸಿ ಜೀವನ ನಡೆಸಲು ಅನುಕೂಲವಾಗಲಿದೆ. ಅಲ್ಲದೆ, ಸಸಣ್ಣನೀರಾವರಿ ಇಲಾಖೆಯಿಂದ ಮಂಜೂರಾಗಿದ್ದ ಯಾವುದೇ ಯೋಜನೆಗೂ ಸಿಎಂ ತಡೆಹಿಡಿದಿಲ್ಲ ಎಂದು ತಿಳಿಸಿದರು.

Advertisement

ಸಚಿವ, ಶಾಸಕರಿಂದ ಕೆರೆಗಳ ವೀಕ್ಷಣೆ: ಮೇಲುಕೋಟೆ ಸಮೀಪದ ಕದಲಗೆರೆ ಕೆರೆ, ದಳವಾಯಿ ಕೆರೆ, ಕೆರೆತೊಣ್ಣೂರಿನ ಕೆರೆ ಮತ್ತು ಬಳಘಟ್ಟ ಏತನೀರಾವರಿ ವಾಟರ್‌ ಟ್ಯಾಂಕ್‌ ಕಾಮಗಾರಿಯನ್ನು ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಸಿ.ಎಸ್‌.ಪುಟ್ಟರಾಜು ವೀಕ್ಷಣೆ ಮಾಡಿದರು.

ಇದನ್ನೂ ಓದಿ :ಕಬ್ಬಿನ ಗದ್ದೆಯಲ್ಲಿ ಚಿರತೆ ಕಳೆಬರ ಪತ್ತೆ

ವಡ್ಡರಹಳ್ಳಿ ಹಳ್ಳದ ಬಳಿ ನಿರ್ಮಿಸುತ್ತಿರುವ ಕೆರೆ ಅಣೆಕಟ್ಟೆ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಬಳಘಟ್ಟ ಏತನೀರಾವರಿಗೆ ನೀರು ಪೂರೈಕೆ ಮಾಡುವ ಕೆಆರ್‌ಎಸ್‌ ಅಣೆಕಟ್ಟೆ ಮುಂಭಾಗದ  ಜಾಕ್‌ವೆಲ್‌ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವ ವಿಚಾರವಾಗಿ ಸಚಿವ ಮಾಧುಸ್ವಾಮಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡರು. ಮನ್‌ಮುಲ್‌ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಸಣ್ಣನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯಂಜಯ ಸ್ವಾಮಿ, ಅಧೀಕ್ಷಕ ಎಂಜಿನಿಯರ್‌ ರಾಜಶೇಖರ್‌, ಇಇ ನಟೇಶ್‌, ಎಇಇ ಶ್ರೀನಿವಾಸಲು, ಎಇ ಅಜಿತ್‌ಉದೀನ್‌, ಅಮೃತ ಕನ್‌ಸ್ಟ್ರಕ್ಸ್‌ನ್‌ ಎಂಡಿ ರವಿ, ಚೈತ್ರ ಸಿವಿಲ್‌ ವೆನನcರಸ್‌ ಲಿಮಿಟೆಡ್‌ನ‌ ಎಂಡಿ ಹೇಮಂತ್‌ ಕುಮಾರ್‌, ಮಣಿ ಅಮೃತ್‌  ಖಂಡರಾದ ಜಕ್ಕನಹಳ್ಳಿ ಸುಂದ್ರಣ್ಣ, ಅಶ್ವಥ್‌ ಕುಮಾರೇಗೌಡ, ಪುಟ್ಟಸ್ವಾಮೀಗೌಡ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next