Advertisement
ತಾಲೂಕಿನ ಕೆ.ಹೊಸೂರು ಗೇಟ್ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಅಧಿಕಾರಿಗೆ ತರಾಟೆ: ಘಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಅಪ್ಪಿರೆಡ್ಡಿ ಅವರನ್ನು ಸಹ ತರಾಟೆಗೆ ತೆಗೆದುಕೊಂಡು. ಸ್ಥಳೀಯವಾಗಿ ಓಡಾಡುವ ಬಸ್ ಗಳು ಕೆ.ಹೊಸೂರು ಗೇಟ್ ಬಳಿ ಸ್ಥಗಿತಗೊಳಿಸುವಂತೆ ಕ್ರಮಕೈಗೊಳ್ಳದಿದ್ದರೆ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಒಂದು ದಿನ ನಮ್ಮ ಶಾಲೆಗಳು ವ್ಯರ್ಥವಾದರೂ ಪರವಾಗಿಲ್ಲ,. ಹೋರಾಟ ಮುಂದುವರಿಸುತ್ತೇವೆ ಎಂದು ತರಾಟೆಗೆ ತೆಗೆದುಕೊಂಡರು.
ಪುಟ್ಟರಾಜು ಕರೆ: ಸಾರಿಗೆ ವ್ಯವಸ್ಥಾಪಕ ಅಪ್ಪಿರೆಡ್ಡಿ ಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ದೂರವಾಣಿ ಕರೆಮಾಡಿ ವಿದ್ಯಾರ್ಥಿಗಳಿಗೆ ಸಮಸ್ಯೆ ಯಾಗದಂತೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಭರವಸೆ: ಬಳಿಕ ಸ್ಥಳೀಯವಾಗಿ ಓಡಾಡುವ ಬಸ್ ಎಲ್ಲಾ ಬಸ್ ಗಳನ್ನು ಕೆ.ಹೊಸೂರು ಗೇಟ್ ಬಳಿ ನಿಲ್ಲಿಸಲು ಹಾಗೂ ಒಂದು ಬಸ್ ಕೆ.ಹೊಸೂರು ಗ್ರಾಮದ ಮೇಲೆ ಓಡಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ವಾಪಸ್ ಪಡೆದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಶ್ರುತಿ, ಸುಚಿತ್ರ, ಭಾವನ ಸೇರಿದಂತೆ ಹಲವರು ಹಾಜರಿದ್ದರು.
2 ಕಿ.ಮೀ. ದೂರ ನಿಲ್ಲಿಸಿದರೆ ನಡೆದುಕೊಂಡು ಬರಬೇಕು:ಕೆಲವು ಬಸ್ ಡ್ರೈವರ್‌ಗಳು ನಮ್ಮೂರು ಗೇಟ್ ಬಿಟ್ಟು ಎರಡು ಕಿ.ಮೀ. ದೂರುದ ಟಿ.ಎಸ್.ಛತ್ರ ಗ್ರಾಮದಲ್ಲಿ ನಿಲ್ಲಿಸಿದ್ದಾರೆ. ಸಂಜೆಯ ವೇಳೆಯಲ್ಲಿ ಹೆಣ್ಣುಮಕ್ಕಳು ಎರಡು ಕಿ.ಮೀ. ದೂರದಿಂದ ನಡೆದುಕೊಂಡು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಕೆಲ ಕಂಡಕ್ಟರ್‌ಗಳು ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ಹರಿಹಾಯ್ದರು.