Advertisement
ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ ಉಡುಪಿ ಜಿಲ್ಲೆ, ಧರ್ಮ ಫೌಂಡೇಶನ್ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಗುರುವಾರ ನಡೆದ “ಧರ್ಮ’ ಮಹಾಸಹಸ್ರಾರ್ಚನ ಪೂಜೆ ಮತ್ತು ಧರ್ಮ ಜಾಗೃತಿ ಅಭಿಯಾನದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇವಾಲಯದ ಪದ್ಧತಿ ಆಡಳಿತಗಾರರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಏನಿದರ ಅರ್ಥ ಎಂದು ಪ್ರಶ್ನಿಸಿದರು.
ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆ ಭಕ್ತರು ಮಾಡಬೇಕೇ ವಿನಾ ನ್ಯಾಯಾಲಯವಲ್ಲ. ಧರ್ಮದ ವಿಷಯದಲ್ಲಿ ಅದು ಹಸ್ತಕ್ಷೇಪ ಮಾಡಬಾರದು ಎಂದು ಆಶೀರ್ವಚನ ನೀಡಿದ ಶ್ರೀ ಪೇಜಾವರ ಶ್ರೀಪಾದರು ಹೇಳಿದರು. ಶಬರಿಮಲೆ ವಿಷಯದಲ್ಲಿ ಸರಕಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಪ್ರಜೆಗಳ ಮೇಲೆ ಧರ್ಮದ ಹೆಸರಿನಲ್ಲಿ ಸರಕಾರ ಹಸ್ತಕ್ಷೇಪ ಮಾಡ ಬಾರದು. ಆದ್ದರಿಂದ ತೀರ್ಪನ್ನು ಮರು ಪರಿಶೀಲಿಸಬೇಕಾಗಿದೆ ಎಂದರು.
ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ ಭವ್ಯ ಸಂಸ್ಕೃತಿ ಹೊಂದಿದ ಧರ್ಮದ ವಿಷಯದಲ್ಲಿ ಮೂಗು ತೂರಿಸುವ ಹಕ್ಕು ನ್ಯಾಯಾಲಯಗಳಿಗೆ ಇಲ್ಲ ಎಂದರು. ಅಯ್ಯಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಮ್ಯುನಿಸ್ಟರು ಈಗ ಅಯ್ಯಪ್ಪ ಭಕ್ತರಿಗೆ ವಿರುದ್ಧವಾಗಿದ್ದಾರೆ ಎಂದು ಕಾಸರಗೋಡಿನ ಕುಂಟಾರು ರವೀಶ ತಂತ್ರಿ ಹೇಳಿದರು. ಅಯ್ಯಪ್ಪ ಸೇವಾ ಸಮಾಜದ ರಾಜ್ಯಾಧ್ಯಕ್ಷ, ನಟ ಶಿವರಾಮ್ ಮಾತ ನಾಡಿ, ಭಕ್ತರ ಭಾವನೆಗೆ ವಿರುದ್ಧವಾಗಿ ರುವ ತೀರ್ಪನ್ನು ಮರುಪರಿಶೀಲಿಸ ಬೇಕು ಎಂದರು. ಹರಿಯಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ಜಿ.ಎನ್. ಸ್ವಾಗತಿಸಿ, ಬೈಕಾಡಿ ಸುಪ್ರಸಾದ ಶೆಟ್ಟಿ ಪ್ರಸ್ತಾವನೆಗೈದರು. ಪಂದಳ ರಾಜರ ಪತ್ನಿ ಮೀರಾ ವರ್ಮ, ಬಾಲಕೃಷ್ಣ ಹೆಗ್ಡೆ, ರಂಜಿತ್ ಶೆಟ್ಟಿ, ಪ್ರಕಾಶ ಶೆಟ್ಟಿ, ವಿಜಯ ಕೊಡವೂರು, ರಾಧಾಕೃಷ್ಣ ಮೆಂಡನ್, ಕಿಶೋರ್ ಡಿ. ಸುವರ್ಣ, ಭೋಜರಾಜ ಕಿದಿಯೂರು, ಬಾಲಕೃಷ್ಣ ಅಮೀನ್ ಮಲ್ಪೆ, ಮಹಾಬಲ ಗುರುಸ್ವಾಮಿ, ಉದಯ ಶೆಟ್ಟಿ, ಗೋಪಾಲ ಪೂಜಾರಿ, ರಘುಚಂದ್ರ, ಬಾಬು ಶೆಟ್ಟಿ, ರಾಜು ಗುರುಸ್ವಾಮಿ ಉಪಸ್ಥಿತರಿದ್ದರು. ದಾಮೋದರ ಶರ್ಮ ನಿರ್ವಹಿಸಿದರು.
Related Articles
ಪಂದಳ ರಾಜ ಶಶಿಕುಮಾರ ವರ್ಮ
Advertisement