Advertisement
ಗ್ರಾಮ ಪಂಚಾಯತ್ ನಡೆದು ಬಂದ ದಾರಿ: ಆರಂಭದಲ್ಲೆ ಪುರಸಭೆ ವ್ಯಾಪ್ತಿ ಹೊಂದಿದ್ದು 1997ರಲ್ಲಿ ಗ್ರಾ.ಪಂ ಆಗಿ ವಿಭಜನೆಗೊಂಡಿತ್ತು. 9627 ಜನಸಂಖ್ಯೆ ಇರುವ ಯಡ್ತರೆ ಗ್ರಾಮ 8650 ಚದರ ಹೆಕ್ಟೇರ್ ವಿಸ್ತಿರ್ಣ ಹೊಂದಿದೆ. 8 ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಹೊಂದಿದೆ.ಬೈಂದೂರಿನ ಪ್ರಮುಖ ಪಟ್ಟಣ ಪ್ರದೇಶದ ವ್ಯಾಪ್ತಿ ಹೊಂದಿರುವುದರಿಂದ ವಾಣಿಜ್ಯ ಸಂಕೀರ್ಣ ಬಾಡಿಗೆ ಸಹಿತ ವಾರ್ಷಿಕ 40ಲಕ್ಷ ರೂ. ಆದಾಯ ಹೊಂದಿದೆ.ಬೈಂದೂರು ಗ್ರಾ.ಪಂ ವ್ಯಾಪ್ತಿಯಲ್ಲಿ 9000 ಜನಸಂಖ್ಯೆ ಹೊಂದಿದ್ದು 21 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 15 ಕಿ.ಮೀ ಸುತ್ತಳತೆಯ ವ್ಯಾಪ್ತಿ ಹೊಂದಿದೆ.
Related Articles
ಯಡ್ತರೆ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 68 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 2 ಅರ್ಜಿ ತಿರಸ್ಕೃತಗೊಂಡಿವೆ. 8 ಅಭ್ಯರ್ಥಿಗಳ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. 58 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೈಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 64 ನಾಮಪತ್ರ ಸಲ್ಲಿಕೆಯಾಗಿದೆ. ಮೂರು ನಾಮಪತ್ರ ತಿರಸðತಗೊಂಡಿದೆ.7 ಅಭ್ಯರ್ಥಿಗಳು ಹಿಂಪಡೆದಿದ್ದಾರೆ. 54 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Advertisement
ಭವಿಷ್ಯದ ಕನಸಿಗೆ ವೇದಿಕೆಯಡ್ತರೆ ಮತ್ತು ಬೈಂದೂರು ವ್ಯಾಪ್ತಿಯಲ್ಲಿ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಗಳಿಸಲಿದ್ದಾರೆ.ಎರಡು ಅವಧಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಧಿಕಾರದಿಂದ ಮತದಾರರು ರೋಸಿಹೋಗಿದ್ದಾರೆ.ಕ್ಷೇತ್ರದ ನೂತನ ಶಾಸಕರ ಅಭಿವೃದ್ದಿ ಯೋಜನೆ ಹಾಗೂ ಭವಿಷ್ಯದ ಕನಸುಗಳಿಗೆ ಈ ಚುನಾವಣೆ ಪ್ರಮುಖ ವೇದಿಕೆಯಾಗಿದೆ.ಗ್ರಾಮೀಣ ಭಾಗ ಹಾಗೂ ಬೈಂದೂರು ಪರಿಸರದಲ್ಲಿ ಉತ್ತಮ ಜನಬೆಂಬಲ ಇರುವ ಅಭ್ಯರ್ಥಿಗಳು ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದಾರೆ. ಸಂಘಟಿತ ಹೋರಾಟದಿಂದ ಅಧಿಕಾರ ಹಿಡಿಯುತ್ತಿದ್ದೇವೆ.
– ದೀಪಕ್ ಕುಮಾರ್ ಶೆಟ್ಟಿ., ಬಿಜೆಪಿ ಉಸ್ತುವಾರಿ ಸಂದೇಹವಿಲ್ಲ
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ.ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಬಾರಿಯೂ ಕೂಡ ಎರಡು ಗ್ರಾ.ಪಂ ನಲ್ಲಿ ಅಧಿಕಾರ ಹಿಡಿಯಲಿದ್ದೇವೆ. ಅತ್ಯಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಗೋಪಾಲ ಪೂಜಾರಿಯವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಪರಿಶ್ರಮಕ್ಕೆ ಮತದಾರರಿಂದ ಸಕಾರಾತ್ಮಕ ಸ್ಪಂದನೆ ದೊರೆಯುವುದರಲ್ಲಿ ಸಂದೇಹವಿಲ್ಲ.
– ಎಸ್.ರಾಜು ಪೂಜಾರಿ, ಕಾಂಗ್ರೆಸ್ ಮುಂದಾಳು