Advertisement
ಗ್ರಾ.ಪಂ.ಗೆ ನೇಮಕವಾದ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕಸಹಾಯಕರನ್ನು ಇನ್ನು ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ ಅಥವಾ ನಿಯೋಜನೆ ಮಾಡುವಂತಿಲ್ಲ. ಈಗಾಗಲೇ ವರ್ಗ ಅಥವಾ ನಿಯೋಜನೆಗೊಂಡವರನ್ನು ತತ್‌ಕ್ಷಣವೇ ಮೂಲ ಸ್ಥಾನಗಳಿಗೆ ಹಿಂದಿರುಗಬೇಕೆಂದು ಸರಕಾರ ನೀಡಿರುವ ಆದೇಶ ಇದಕ್ಕೆ ಕಾರಣ. ಕಾರ್ಯದರ್ಶಿ ಯಾ ಪಿಡಿಒ ಇಲ್ಲ ಎಂಬ ಸಬೂಬಿಗೆ ಇನ್ನು ಮುಕ್ತಿ ದೊರೆಯಲಿದೆ.
Related Articles
ಅನ್ಯ ಇಲಾಖೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಗ್ರಾ.ಪಂ. ಸಿಬಂದಿಯ ನಿಯೋಜನೆಯೂ ರದ್ದಾಗಿ ಅವರು
ಮೂಲಸ್ಥಾನಗಳಲ್ಲಿ ವರದಿ ಮಾಡಿಕೊಳ್ಳ ಬೇಕಿದೆ. ಹೊರಜಿಲ್ಲೆಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಸರಕಾರಿ ಆದೇಶದ ಅನ್ವಯ ನಿಯೋಜನೆ ಮೇಲೆ ಕಾರ್ಯನಿರ್ವಹಿ ಸುವ ಹಾಗೂ ಜಿಲ್ಲೆಯ ಒಳಗೆ ತಾಲೂಕು ಹಾಗೂ ಇತರ ಗ್ರಾ.ಪಂ.ನಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಸಿಬಂದಿಗೂ ಈ ಆದೇಶ ಅನ್ವಯವಾಗು
ತ್ತದೆ. ಇನ್ನು ಮುಂದೆ ಸರಕಾರದ ಪೂರ್ವ ಅನುಮೋದನೆ ಇಲ್ಲದೆ ಜಿ.ಪಂ./ತಾ. ಪಂ. ಮಟ್ಟದಲ್ಲಿ ಯಾವುದೇ ರೀತಿಯ ವರ್ಗಾವಣೆ ಯಾ ನಿಯೋಜನೆ ಮಾಡಬಾರದು ಎಂದೂ ಸೂಚನೆ ನೀಡಲಾಗಿದೆ.
Advertisement
ಯಾರಿಗೆಲ್ಲ ರಿಯಾಯಿತಿ? ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು, ಸಚಿವರು, ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಮಂಜೂರಾದ ಹುದ್ದೆಯಡಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪಿಡಿಒ/ಕಾರ್ಯದರ್ಶಿ ಹಾಗೂ ದ್ವಿ.ದ. ಲೆಕ್ಕ ಸಹಾಯಕರಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ. ಪಿಡಿಒ “ಪ್ರಭಾರ’ ಕಾರ್ಯಕ್ಕೆ ಸಮ್ಮತಿ
ಸರಕಾರದ ಹೊಸ ಆದೇಶದಂತೆ, ಪಿಡಿಒ ಹುದ್ದೆ ನಿವೃತ್ತಿ, ಅಮಾನತು ಹಾಗೂ ಇತರ ಕಾರಣಗಳಿಗೆ ತೆರವಾದಲ್ಲಿ, ಆ ಗ್ರಾ.ಪಂ.ನಲ್ಲಿ ಗ್ರೇಡ್-1 ಕಾರ್ಯದರ್ಶಿ ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಪ್ರಭಾರವಾಗಿ ಪಿಡಿಒ ಹುದ್ದೆಯನ್ನು ವಹಿಸಬಹುದು. ಪೂರ್ಣಕಾಲಿಕ ಗ್ರೇಡ್-1 ಕಾರ್ಯದರ್ಶಿ ಇಲ್ಲದಿದ್ದಲ್ಲಿ ಹತ್ತಿರದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಹೆಚ್ಚುವರಿ ಪ್ರಭಾರ ವಹಿಸಬಹುದು. ಆದರೆ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿ. ದರ್ಜೆ ಲೆಕ್ಕ ಸಹಾಯಕರಿಗೆ ಪಿಡಿಒ ಹುದ್ದೆ ಪ್ರಭಾರ ವಹಿಸುವಂತಿಲ್ಲ. ಒಂದೆರಡು ತಿಂಗಳಲ್ಲಿ ಪರಿಹಾರ
ಪಿಡಿಒ, ಕಾರ್ಯದರ್ಶಿ ಗಳನ್ನು ಸ್ಥಳೀಯ ಮಟ್ಟ ದಲ್ಲಿ ವರ್ಗಾವಣೆ, ನಿಯೋಜನೆ ಮಾಡುವಂತಿಲ್ಲ ಎಂದು ಸರಕಾರದ ಆದೇಶ ಬಂದಿದೆ. ಹೀಗಾಗಿ ಜಿ.ಪಂ., ತಾ.ಪಂ.ನಲ್ಲಿ ನಿಯೋಜನೆಗೊಂಡ ಪಂಚಾಯತ್ ಅಧಿಕಾರಿಗಳ ವಿವರವನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲಿಗೆ ಪರ್ಯಾಯವಾಗಿ ಇತರರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಒಂದೆರಡು ತಿಂಗಳಿನಲ್ಲಿ ಈ ವಿಚಾರ ಪರಿಹಾರವಾಗಲಿದೆ.
ಡಾ| ಸೆಲ್ವಮಣಿ, ಜಿ.ಪಂ. ಸಿಇಒ, ದ.ಕ.