Advertisement
ಶೂರ್ಪನಖೀ ರಾವಣನ ಸಹೋದರಿ. ವಿದ್ಯುಜ್ಜಿಹ್ವನೆಂಬಾತ ಈಕೆಯ ಗಂಡ. ಕಾಲಕೇಯರೊಂದಿಗಿನ ಯುದ್ಧ ಸಂದರ್ಭದಲ್ಲಿ ರಾವಣನಿಂದ ಅಚಾತುರ್ಯದಿಂದ ಆತ ಕೊಲ್ಲಲ್ಪಟ್ಟನು. ದುಃಖೀತಳಾದ ಶೂರ್ಪನಖೀಯನ್ನು ದಂಡಕಾರಣ್ಯದಲ್ಲಿ ಅಣ್ಣಂದಿರಾದ ಖರ-ದೂಷಣರ ಜತೆ ಹದಿನಾಲ್ಕು ಸಾವಿರ ರಾಕ್ಷಸರೊಂದಿಗೆ ವಾಸಿಸುವಂತೆ ರಾವಣ ವ್ಯವಸ್ಥೆ ಮಾಡುತ್ತಾನೆ.
Related Articles
Advertisement
ಇದಕ್ಕೆ ಉತ್ತರವಾಗಿ ಶ್ರೀರಾಮನು “ಮದನನ ಪಟ್ಟದ ರಾಣಿ…’ ಪದದ ಮೂಲಕ ತನಗೆ ಏಕಪತ್ನಿವ್ರತವಿದ್ದ ಕಾರಣ ನನಗಿಂತ ನೂರು ಪಟ್ಟು ಚೆಲುವ ಅನುಜನಾಗಿಹ ಲಕ್ಷ್ಮಣ ಇದ್ದಾನೆ ಎಂದು ಆತನಲ್ಲಿಗೆ ಕಳಿಸಿಕೊಡುವ ಮೂಲಕ ತನ್ನದಾದ ಪೂರ್ವ ಯೋಜನೆಗೆ ಭೂಮಿಕೆ ಒದಗಿಸಿದರು.
ಇಲ್ಲಿಂದ ಪುನಃ ಶೂರ್ಪನಖೀಯು “ಚಂದದಿಂದ ಬಂದಳಬಲೋಚನೆ..’ ಎನ್ನುವ ಪದದ ಮೂಲಕ ತಾನು ಇನ್ನಷ್ಟು ಚಂದವಾಗಿ ಲಕ್ಷ್ಮಣನ ಇದಿರು ಪ್ರಕಟಗೊಳ್ಳಬೇಕು ಎನ್ನುವ ಆಶಯವನ್ನು ಅತ್ಯಂತ ಅಚ್ಚುಕಟ್ಟಾಗಿ ಅಭಿನಯಿಸಿ ಮುಂದೆ ಲಕ್ಷ್ಮಣನಲ್ಲಿ “ಕಾಮಸನ್ನಿಭ ಮಾತ ಕೇಳು..’ ಎನ್ನುವ ಪದ್ಯದ ಮೂಲಕ ತನ್ನ ಕಾಮವಾಂಛೆಯನ್ನು ಪ್ರಸ್ತುತ ಪಡಿಸುವಲ್ಲಿ ಎಲ್ಲಿಯೂ ರಂಗ ಭಾಷೆಯನ್ನು ಮೀರದಿರುವುದು ಶ್ಲಾಘನೀಯ. ಒಂದೆರಡು ಕಡೆ ವಿನಾಕಾರಣವಾಗಿ ಚೆಲ್ಲುತನ, ಲೌಕಿಕ ವಿಚಾರಗಳು ಇಣುಕಿದರೂ, ಸಂಕೀರ್ಣವಾದ ಶೂರ್ಪನಖೀಯ ಪಾತ್ರದಲ್ಲಿ ಶಶಿಕಾಂತರು ಹಾಗೂ ಆದರ್ಶ ಪುರುಷ ಶ್ರೀ ರಾಮನ ಪಾತ್ರದಲ್ಲಿ ಮಂಕಿಯವರ ಒಟ್ಟಂದದ ನಿರ್ವಹಣೆ ಅತ್ಯುತ್ತಮವಾಗಿ ಮೂಡಿ ಬಂದಿದೆ.
ಶೂರ್ಪನಖೀಯು ರಕ್ಕಸಿಯ ಆಹಾರ್ಯದಲ್ಲಿ ಸಂಪ್ರದಾಯಬದ್ಧ ಬಣ್ಣದ ವೇಷವಾಗಿ ಮೂಡಿಬಾರದುದು ಕೊರತೆಯಾದರೂ ರಂಗದಲ್ಲಿ ಯಾವುದೇ ಪಾತ್ರವನ್ನಾದರೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾವಿದ ನರಸಿಂಹ ಗಾಂವ್ಕರ್ ರಾಕ್ಷಸಿ ಪಾತ್ರವನ್ನು ನಾಟಕೀಯ ವೇಷವಾಗಿಸಿ ಸಮರ್ಥವಾಗಿ ನಿರ್ವಹಿಸಿದರು.ಇಡೀ ಪ್ರಸಂಗ ಪರಿಪೂರ್ಣವಾಗಿ ಕಳೆಗಟ್ಟಲು ಸಮರ್ಥ ಹಿಮ್ಮೇಳದ ಸಾಥಿಯೂ ಕಾರಣವಾಯ್ತು .
ಪೌರಾಣಿಕ ಪ್ರಸಂಗಗಳನ್ನು ಆಸ್ವಾದಿಸಲು ಪ್ರೇಕ್ಷಕನಾದವನಿಗೆ ಒಂದಷ್ಟು ಮೂಲ ವಿಚಾರಗಳ ಅರಿವಿನ ಅಗತ್ಯವಿದೆ . ಆತನಿಗೆ ಆಯಾಯ ಪ್ರಸಂಗಗಳ ಪುರಾಣೇತಿಹಾಸದ ಜ್ಞಾನ, ಪದ್ಯ ಬಳಕೆಗಳ ಅರಿವಿದ್ದಲ್ಲಿ ತಾನೂ ರಂಗಕ್ರಿಯೆಯನ್ನು ಅನುಭವಿಸುತ್ತಾನೆ. ಗತಕಾಲದ ಹಿರಿಯ ಕಲಾವಿದರಿಂದ ಸಂಪನ್ನಗೊಂಡ ಯಕ್ಷಗಾನ ಪ್ರದರ್ಶನವನ್ನು ಕಂಡ ಅನುಭವದೊಂದಿಗೆ ವರ್ತಮಾನದ ಕಲಾವಿದರ ಪ್ರದರ್ಶನವನ್ನು ಸಮೀಕರಿಸಿಕೊಂಡು ಅನುಭವಿಸಬೇಕು.ಅದಿಲ್ಲವಾದಲ್ಲಿ ಕೇವಲ ಅನ್ಯರಂಗದ ಗಿಮಿಕ್‌ಗಳಲ್ಲಿ ಸಿಗುವ ಕ್ಷಣಿಕ ಸುಖವನ್ನು ಯಕ್ಷಗಾನದಲ್ಲೂ ಅಪೇಕ್ಷಿಸುವ ಯುವ ಪೀಳಿಗೆಯು, ಅದನ್ನೇ ಯಕ್ಷಗಾನವೆಂಬ ಭ್ರಮೆಯಿಂದ ಪುರಾಣ ಪ್ರಸಂಗದಿಂದ ವಿಮುಖರಾಗುವುದು ನಿಶ್ಚಯ.
ಇಂತಹ ಕಾಲಘಟ್ಟದಲ್ಲಿ ಯಕ್ಷಗಾನರಂಗವು ಈ ರೀತಿಯ ಪ್ರಬುದ್ಧ ಕಲಾವಿದರ ನಿರ್ವಹಣೆಯಲ್ಲಿ ಪೌರಾಣಿಕ ಪ್ರಸಂಗಗಳು ರಂಗದಲ್ಲಿ ಕಳೆಗಟ್ಟಿ ಯುವ ಪೀಳಿಗೆಯನ್ನು ಕಲಾತ್ಮಕವಾಗಿ ಪ್ರಬುದ್ಧವಾಗಿಸುವಲ್ಲಿ ಸಫಲಗೊಂಡು ಕಳೆದುಹೋದ ತನ್ನ ಸುವರ್ಣ ಕಾಲವನ್ನು ಪುನರ್ ಪ್ರತಿಷ್ಠಾಪಿಸುವಲ್ಲಿ ಅನುಮಾನವಿಲ್ಲ.
ಸುರೇಂದ್ರ ಪಣಿಯೂರ್