Advertisement
ನಗರದ ಸಿದ್ಧಗಂಗಾ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳು ಶನಿವಾರ ಬೆಳಗ್ಗೆ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಹಾಗೂ ವಿಜಯಾನಂದ ಕಾಶಂಪ್ಪನವರ್ ನೇತೃತ್ವದಲ್ಲಿ ಸಭೆ ನಡೆಸಿ ಅರಮನೆ ಮೈದಾನದಲ್ಲೇ ಸಮಾ ವೇಶ ನಡೆಸುವ ಸಂಬಂಧ ನಿರ್ಣಯ ಕೈಗೊಂಡರು.
Related Articles
Advertisement
ಮಾ.4ರ ವರೆಗೂ ಮೀಸಲಾತಿ ಸಂಬಂಧ ಯಾವುದೇ ನಿರ್ಣಯ ಕೈಗೊಳ್ಳದಿದ್ದರೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಹೇಳಿದರು.
ಮೀಸಲಾತಿ ಪ್ರಮಾಣ ಪತ್ರ ವನ್ನು ಪಡೆಯದ ಹೊರತು ಊರಿಗೆ ವಾಪಸ್ಸಾಗುವುದಿಲ್ಲ. ಫೆ. 21 ರೊಳಗಾಗಿಯೇ ಸಿಎಂ ಯಡಿಯೂರಪ್ಪ ನಮಗೆ ಮೀಸಲಾತಿ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬೆಂಗಳೂರಿನ ವಿಜಯನಗರ, ಬಸವೇಶ್ವರ ನಗರಗಳಲ್ಲೂ ಪಾದಯಾತ್ರೆ ನಡೆಸಲಾಗುವುದು ಎಂದರು. ಸಿದ್ಧಗಂಗಾ ಮಠಕ ಶುಕ್ರವಾರ ಸಂಜೆ ಪಾದಯಾತ್ರೆಯಲ್ಲಿ ಆಗಮಿಸಿದ ಶ್ರೀಗಳು ಹಿರಿಯ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ವಾಸ್ತವ್ಯ ಹೂಡಿದ್ದರು.
ಸಿದ್ಧಗಂಗಾ ಮಠದಿಂದ ಹೊರಟ ಪಾದಯಾತ್ರೆಗೆ ಹೀರೇಹಳ್ಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಠಾಧೀಶರು ಸ್ವಾಮೀಜಿಗಳಿಗೆ ಸಾಥ್ ನೀಡಿದರು. ವಿಭೂತಿಪುರ ಮಠದ ಮಹಂತಲಿಂಗ ಶಿವಾಚಾರ್ಯ,ಸಾರಂಗ ಮಠದ ಪ್ರಭು ಸಾರಂಗ ದೇವರು, ಹುಕ್ಕೇರಿಶ್ರೀಗಳು, ಶಿವಗಂಗೆ ಶ್ರೀಗಳು, ಕನ್ನೋಳ್ಳಿ ಶ್ರೀಗಳು,ಭಾಗವಾಡೀ, ಮನುಗೂಳಿ, ಯಕಂಚಿ ಸೇರಿದಂತೆ ಅನೇಕ ಮಠಾಧೀಶರು ಭಾಗಿಯಾಗಿದ್ದಾರೆ.