Advertisement
ಅರಸ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಶಿಕ್ಷಣ ಪಡೆಯಬೇಕು ಎಂಬ ಹಿನ್ನೆಲೆಯಲ್ಲಿ ತನ್ನ ಪುತ್ರಿಯರಾದ ಬ್ರಾಹ್ಮಿà ಹಾಗೂ ಸುಂದರಿ, ಪುತ್ರರಾದ ಭರತ ಹಾಗೂ ಬಾಹುಬಲಿ ಸಹಿತ ಎಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾನೆ. ಮೊದಲಿಗೆ ಬ್ರಾಹ್ಮಿàಗೆ ಅಕ್ಷರಾಭ್ಯಾಸ ಆರಂಭವಾಗುತ್ತದೆ. ಮುಂದೆ ನಿನ್ನ ಹೆಸರಿನಲ್ಲೇ ಲಿಪಿಯೊಂದು ಪ್ರಸಿದ್ಧಿ ಪಡೆಯಲಿ ಎಂದು ಹರಸುತ್ತಾನೆ.
ಪಂಚಮಹಾವೈಭವದ ಅಕ್ಷರಾಭ್ಯಾಸದಲ್ಲಿ ವೃಷಭದೇವನ ಪುತ್ರಿ ಬ್ರಾಹ್ಮಿàಯ ಪಾತ್ರದಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರ ಮೊಮ್ಮಗಳು, ಶ್ರದ್ಧಾ ಅಮಿತ್ ಅವರ ಪುತ್ರಿ ಮಾನ್ಯಾ ಅವರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮೊದಲ ದಿನ ಪುತ್ರಿ ಶ್ರದ್ಧಾ ಅಮಿತ್ ನೃತ್ಯ ಮಾಡಿದ್ದರು.
*
ಮಹಾ ಮಸ್ತಕಾಭಿಷೇಕದಲ್ಲಿ ಇಂದು
ಬೆಳ್ತಂಗಡಿ: ಮಹಾಮಸ್ತಕಾಭಿಷೇಕದ ಪಂಚಮಹಾವೈಭವದಲ್ಲಿ ಫೆ. 13ರ ಬೆಳಗ್ಗೆ 9.30ಕ್ಕೆ ಧರ್ಮಸ್ಥಳದಿಂದ ಶಾಂತಿವನದ ವರೆಗೆ ಹಾಗೂ ಸಂಜೆ 4ಕ್ಕೆ ಶಾಂತಿವನದಿಂದ ಧರ್ಮಸ್ಥಳದ ವರೆಗೆ ಭರತೇಶನ ದಿಗ್ವಿಜಯದ
2 ಐತಿಹಾಸಿಕ ಮೆರವಣಿಗೆಗಳು ನಡೆಯಲಿವೆ.
Related Articles
ರತ್ನಗಿರಿ ಬೆಟ್ಟದಲ್ಲಿ ಬೆಳಗ್ಗೆ 8ಕ್ಕೆ ಅಗ್ರೋದಕ ಮೆರವಣಿಗೆ, 216 ಕಲಶ ಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ರಿಂದ ಯಜ್ಞಶಾಲೆಯಲ್ಲಿ ಜಿನಸಹಸ್ರನಾಮ ವಿಧಾನ, ಸಂಜೆ ಧ್ವಜಪೂಜೆ, ಮಹಾಮಂಗಳಾರತಿ ನಡೆಯಲಿವೆ.
Advertisement