Advertisement
ಸ್ಥಳೀಯರು ಮಾತ್ರವಲ್ಲದೆ, ರಾಜ್ಯದ ವಿವಿಧೆಡೆಯಿಂದ ದೇವಸ್ಥಾನ ಪ್ರವಾಸದ ಜತೆಗೆ ಪಣಂಬೂರು ಬೀಚ್‌ಗೂ ಜನರು ಕುಟುಂಬ ಸಹಿತವಾಗಿ ಬಂದು ಸಮುದ್ರದಲ್ಲಿ ಆಟವಾಡಿ ಸಂಭ್ರಮ ಪಟ್ಟರು.
Related Articles
ಕೋವಿಡ್ ನಿರ್ಬಂಧಗಳಿಂದಾಗಿ ಬಿಕೋ ಎನ್ನುತ್ತಿದ್ದ ಮಲ್ಪೆ ಬೀಚ್ ಪ್ರವಾಸಿಗರ ಆಗಮನದಿಂದ ಕಳೆ ಪಡೆದುಕೊಂಡಿದೆ. ಈ ವಾರಾಂತ್ಯ ಮಲ್ಪೆ ಸಹಿತ ಜಿಲ್ಲೆಯ ಕಡಲ ತೀರಗಳು ಚಟುವಟಿಕೆಯಿಂದ ಕೂಡಿದ್ದವು. ಸ್ಥಳೀಯರು, ದೂರದ ಊರುಗಳ ಪ್ರವಾಸಿ ಗರು ಮಲ್ಪೆಯಲ್ಲಿ ವಾರಾಂತ್ಯವನ್ನು ಸಂಭ್ರಮಿ ಸಿದರು. ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಕಾರಣದಿಂದಾಗಿ ಜನಸಾಮಾನ್ಯರ ಹೊರಗಿನ ಓಡಾಟ ಹೆಚ್ಚಾಗಿರದ ಕಾರಣ ಇದುವರೆಗೆ ಪ್ರವಾಸೀ ತಾಣಗಳು ಖಾಲಿಯಾಗಿದ್ದವು. ಈಗ ಮಲ್ಪೆ ಸಹಿತ ಜಿಲ್ಲೆಯ ಕಡಲ ತೀರಗಳಲ್ಲಿ ಜನರ ಸಂಜೆಯ ವಿಹಾರ, ಮೋಜಿನಾಟ ಮತ್ತೆ ಆರಂಭವಾಗಿದೆ.
Advertisement