Advertisement

Panamburu Beach: ನೈತಿಕ ಪೊಲೀಸ್‌ಗಿರಿ

10:48 PM Feb 05, 2024 | Team Udayavani |

ಪಣಂಬೂರು: ಪಣಂಬೂರು ಬೀಚ್‌ನಲ್ಲಿ ಅನ್ಯ ಕೋಮಿನ ಯುವಕನೊಂದಿಗಿದ್ದ ಯುವತಿಗೆ ನಿಂದಿಸಿ ಆಕ್ಷೇಪಾರ್ಹ ಮಾತುಗಳನ್ನಾಡಿದ ಘಟನೆ ರವಿವಾರ ಸಂಜೆ ನಡೆದಿದೆ.

Advertisement

ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿಯ ಮೂವರು, ಬಂಟ್ವಾಳದ ಓರ್ವನನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಡೂರು ಮೂಲದ ಹಿಂದೂ ಯುವತಿ ಕೆಲಸದ ನಿಮಿತ್ತ ಮಲ್ಪೆಗೆ ಹೋಗುವ ಸಂದರ್ಭ ಪರಿಚಿತ ನಾ ಗಿದ್ದ ನಿಜಾಮುದ್ದಿನ್‌ಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿ ರುವುದರಿಂದ ಅಭಿನಂದಿಸಲು ಪಣಂಬೂರು ಬೀಚಿನಲ್ಲಿ ಭೇಟಿ ಯಾಗಿದ್ದರು. ಯುವಕರ ಗುಂಪು ನಮ್ಮಿಬ್ಬರನ್ನು ಅಡ್ಡಗಟ್ಟಿದ್ದಲ್ಲದೆ, ಜತೆಗೆ ಇದ್ದಿದ್ದಕ್ಕೆ ಬೈದು ಆಕ್ಷೇಪಿಸಿ ದ್ದಾರೆ. ಕೆಲವರು ವೀಡಿಯೋ ಮಾಡಿದ್ದಾರೆ. ಇದರಿಂದ ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಯುವಕರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next