Advertisement
ಕೋಸ್ಟ್‌ಗಾರ್ಡ್ ನೇತೃತ್ವದಲ್ಲಿ ಪಣಂಬೂರು ಬೀಚ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಶಾಲಾ, ಕಾಲೇಜು, ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಇಂತಹ ಉತ್ತಮ ಕಾಯಕದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.ಕೆಐಒಸಿಎಲ್ ಸಿಎಂಡಿ ಸುಬ್ಬರಾವ್, ಕಾರ್ಪೋರೇಷನ್ ಬ್ಯಾಂಕಿನ ಎಜಿಎಂ ಅಂಬರೀಷ್, ಇಂಡಿಗೋ ಏರ್‌ಲೈನ್ಸ್‌ನ ಮ್ಯಾನೇಜರ್ ಅರ್ಚನ, ಕೆಎಂಎಫ್ ಆಡಳಿತ ನಿರ್ದೇಶಕ ಡಾ| ಜಿ.ವಿ. ಹೆಗ್ಡೆ, ಬಿಎಸ್‌ಎಫ್‌ನ ಗಣೇಶ್, ಪಣಂಬೂರು ಬೀಚ್ ಸಿಇಒ ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಎ.ಜೆ.ಆಸ್ಪತ್ರೆ, ಕೆಎಂಸಿ, ಕರಾವಳಿ ಕಾವಲು ಪಡೆ, ಕೆಐಒಸಿಎಲ್, ಬಿಎಎಸ್‌ಎಫ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಕೋಸ್ಟ್‌ಗಾರ್ಡ್, ಕೇಂದ್ರೀಯ ವಿದ್ಯಾಲಯ, ರೋಟರಿ ಸಹಿತ ವಿವಿಧ ಸಂಘ – ಸಂಸ್ಥೆಗಳು ಸ್ವತ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಕೋಸ್ಟ್‌ಗಾರ್ಡ್ ಡಿಐಜಿ ಎಸ್.ಎಸ್. ದಸೀಲ ಮಾತನಾಡಿ, ಸಮುದ್ರವನ್ನು ಸ್ವತ್ಛವಾಗಿಡಲು ನಾವೆಲ್ಲಾ ಪಣತೊಡಬೇಕಿದೆ. ಜಲಚರಗಳು ಉಳಿಯ ಬೇಕಿದ್ದರೆ ಸಮುದ್ರದ ನೀರು ಸ್ವತ್ಛವಾಗಿರಬೇಕಾಗುತ್ತದೆ. ಸಿಕ್ಕಿದ್ದನ್ನೆಲ್ಲಾ ನಾವು ಸಮುದ್ರಕ್ಕೆ ಸುರಿದರೆ ಅದರಲ್ಲಿರುವ ಇತರ ಜೀವಿಗಳಿಗೆ ಕಂಕಟಕವಾಗಬಹದು. ಒಂದು ದಿನ ಸಾಂಕೇತಿಕವಾಗಿ ಸಮುದ್ರತೀರವನ್ನು ನಾವು ಸ್ವತ್ಛತೆ ಮಾಡಿದರೂ ಭವಿಷ್ಯದಲ್ಲಿ ಎಲ್ಲರಿಗೂ ಇದರ ಅರಿವು ಮೂಡಿಸುವ ಮಹತ್ತರ ಉದ್ದೇಶವಿದೆ ಎಂದರು.