Advertisement

ಪನಾಮಾ ದಾಖಲೆ: 5 ಕಂಪೆನಿಗಳ ವಿಚಾರಣೆ ಶುರು

08:25 AM Sep 10, 2017 | Team Udayavani |

ಹೊಸದಿಲ್ಲಿ : ಕಳೆದ ವರ್ಷ ಬಹಿರಂಗಗೊಂಡಿದ್ದ ಪನಾಮಾ ದಾಖಲೆಗಳಲ್ಲಿ ಉಲ್ಲೇಖಗೊಂಡಿದ್ದ ಭಾರತೀಯ ಕಂಪೆನಿಗಳು, ಟ್ರಸ್ಟ್‌ಗಳ ಪೈಕಿ ಐದರ ವಿರುದ್ಧ ದೇಶದ ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆ ಶುರುವಾಗಿದೆ. ಈ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ.

Advertisement

ಐದು ಟ್ರಸ್ಟ್‌ ಯಾ ಕಂಪೆನಿಗಳ ವಿರುದ್ಧ 13 ದೇಶಗಳಿಂದ ಸಾಕ್ಷ್ಯಗಳು ಲಭಿಸಿವೆ. ಹೀಗಾಗಿ ಅವುಗಳು ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಂತಾಗಿದೆ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಕಪ್ಪುಹಣ ವಿರುದ್ಧ 2015ರಲ್ಲಿ ಅಂಗೀಕಾರಗೊಂಡ ಹೊಸ ಕಾಯ್ದೆಯನ್ವಯವೂ ಈ ಕಂಪೆನಿಗಳ ವಿರುದ್ಧ ಮೊಕದ್ದಮೆ ಹೂಡಲಾಗುತ್ತದೆ. ವರ್ಷದ ಆರಂಭದಲ್ಲಿ ವಿವಿಧ ದೇಶಗಳಿಗೆ 283 ಪ್ರಕರಣಗಳಲ್ಲಿ ಮಾಹಿತಿ ಕೇಳಿ ಕೋರಿಕೆ ಸಲ್ಲಿಸಿತ್ತು. ಆ ಸಂಖ್ಯೆ ಈಗ 300 ದಾಟಿದೆ. ಒಟ್ಟಾರೆ 240 ಪ್ರಕರಣಗಳ ಪೈಕಿ ಕ್ರಮ ಕೈಗೊಳ್ಳಬಹುದಾದ 70 ಕೇಸುಗಳನ್ನು ಕೈಗೆತ್ತಿಕೊಳ್ಳಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ. ಬಹು ತನಿಖಾ ಸಂಸ್ಥೆಗೆ ಈಗ ಬ್ರಿಟಿಷ್‌ ವರ್ಜಿನ್‌ ದ್ವೀಪಗಳು, ಸೈಪ್ರಸ್‌ ಮತ್ತು ಸೆಷಲ್ಸ್‌ನಿಂದಲೂ ಮಾಹಿತಿಗಳು ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next