ಪಣಜಿ: ಗೋವಾ ರಾಜ್ಯದಲ್ಲಿ ಕಳೆದ ಸುಮಾರು ಮೂರು ದಿನಗಳಿಂದ ಮಳೆ ಸಕ್ರೀಯಗೊಂಡಿದೆ. ಇದರಿಂದಾಗಿ ರಾಜ್ಯದಲ್ಲಿನ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿವೆ. ವಾಳವಂಟಿ ನದಿಯ ನೀರಿನ ಮಟ್ಟವೂ ಏರಿಕೆಯಾಗುತ್ತಿದ್ದು, ಪೆಡೋಸ್ ಜಲಶುದ್ಧಿಕರಣ ಘಟಕಕ್ಕೆ ನೀರಿನ ಕೊರತೆಯಾಗುವುದಿಲ್ಲ ಎಂದು ಗೋವಾ ರಾಜ್ಯ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರ ನಿಮಿತ್ತ ಕಾಸರಪಾಲ್‍ಗೆ ಭೇಟಿ ನೀಡಿದ ಸಚಿವ ಸುಭಾಷ್ ಶಿರೋಡ್ಕರ್ ಅವರು ಪಡೋಸೆ ನೀರು ಶುದ್ಧೀಕರಣ ಘಟಕದ ಪ್ರಸ್ತುತ ಸ್ಥಿತಿಗತಿ ಕುರಿತು ಕೇಳಿದಾಗ ಮೇಲಿನ ವಿವರಣೆ ನೀಡಿದರು.
ಅಂಜುಣೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಕುಸಿತವು ನೆರೆಯ ನೀರು ಸಂಸ್ಕರಣಾ ಯೋಜನೆಗಳಿಂದ ನೀರಿನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಪಡೋಸೆ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಸಚಿವ ಸುಭಾಷ್ ಶಿರೋಡ್ಕರ್ ಈ ಘಟಕದಿಂದ ತೃಪ್ತಿಕರ ನೀರು ಪೂರೈಕೆಯಾಗುತ್ತಿದೆ ಎಂದರು.
ಕಾಲಕಾಲಕ್ಕೆ ನೀರಿನ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಸುಗಮ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಗೋವಾ ರಾಜ್ಯದಲ್ಲಿ ಕಳೆದ ಸುಮಾರು ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರವುದರಿಂದ ರಾಜ್ಯದಲ್ಲಿನ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಗೋವಾ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಾಣುವ ಲಕ್ಷಣ ಕಂಡುಬರುತ್ತಿದೆ.