ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಡ್ರೈನೇಜ್, ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್, ಸುಸಜ್ಜಿತ ರಸ್ತೆ ಹೀಗೆ ಹಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಪಣಜಿ ಮಹಾನಗರದ ಎಲ್ಲ ಪ್ರಮುಖ ರಸ್ತೆಗಳನ್ನು ಅಗೆದುಹಾಕಲಾಗಿದ್ದು ಕಳೆದ ಕೆಲ ತಿಂಗಳುಗಳಿಂದ ಜನತೆ ಓಡಾಟ ನಡೆಸಲು ಪರದಾಡುವಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ಡ್ರೈನೇಜ್ ಕಾಮಗಾರಿ ಸ್ಥಳದಲ್ಲಿ ರಸ್ತೆ ಅಗೆದು ಗುಂಡಿ ತೆಗೆದ ಕೆಲ ಸ್ಥಳಗಳಲ್ಲಿ ಕಳೆದ ಕೆಲ ದಿನಗಳ ಹಿಂದೆ ಟ್ರಕ್, ಬೈಕ್ ಸೇರಿದಂತೆ ವಿವಿಧ ಅಪಘಾತ ನಡೆದಿರುವುದನ್ನೂ ಉಲ್ಲೇಖಿಸಬಹುದಾಗಿದೆ.
ಸದ್ಯ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಣಜಿಯಲ್ಲಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಜನತೆ ಆತಂಕ ಹೆಚ್ಚುವಂತಾಗಿದೆ. ಮಳೆಗಾಲ ಆರಂಭಗೊಂಡರೆ ಇಲ್ಲಿ ರಸ್ತೆಗಳಲ್ಲಿ ಎಲ್ಲಿ ಗುಂಡಿ ತೆಗೆಯಲಾಗಿದೆ ಎಂಬುದನ್ನು ಕೂಡ ಅರಿಯಲಾಗದೆಯೇ ಅಪಘಾತಗಳು ಹೆಚ್ಚುವ ಆತಂಕವಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Andhra Pradesh ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆ
Related Articles
ಒಟ್ಟಾರೆ ಈ ಅಭಿವೃದ್ಧಿ ಕಾಮಗಾರಿ ಸರಕಾರ ಶೀಘ್ರವಾಗಿ ಪೂರ್ಣಗೊಳಿಸದಿದ್ದಲ್ಲಿ ಮಳೆಗಾಲದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂಬಂತಾಗಲಿದೆ.