ಪಣಜಿ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. 12 ರಾಜ್ಯಗಳ 94 ಲೋಕಸಭಾ ಸ್ಥಾನಗಳಿಗೆ ಮೇ. 7 ರಂದು ಮತದಾನ ನಡೆಯಲಿದ್ದು, ಮಹಾರಾಷ್ಟ್ರ, ಗೋವಾ, ಗುಜರಾತ್, ಕರ್ನಾಟಕ ಮತ್ತು ಇತರ ರಾಜ್ಯಗಳನ್ನು ಒಳಗೊಂಡಿದೆ.
94 ಸ್ಥಾನಗಳಿಗೆ 1,352 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಶೇಷವಾಗಿ ಈ ಎಲ್ಲಾ ಅಭ್ಯರ್ಥಿಗಳ ಪೈಕಿ ದಕ್ಷಿಣ ಗೋವಾದ ಬಿಜೆಪಿ ಅಭ್ಯರ್ಥಿ ಪಲ್ಲವಿ ಧೆಂಪೊ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ಗೋವಾದಿಂದ ಎರಡು ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಉತ್ತರದಲ್ಲಿ ಶ್ರೀಪಾದ್ ನಾಯಕ್ ಮತ್ತು ದಕ್ಷಿಣದಲ್ಲಿ ಪಲ್ಲವಿ ದೆಂಪೆ ಅವರನ್ನು ನಾಮನಿರ್ದೇಶನ ಮಾಡಿದೆ. ಗೋವಾದಲ್ಲಿ ಮೊದಲ ಬಾರಿಗೆ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪಲ್ಲವಿ ಧೆಂಪೆ ತಮ್ಮ ಅಫಿಡವಿಟ್‍ನಲ್ಲಿ 255.44 ಕೋಟಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಪತಿ ಶ್ರೀನಿವಾಸ ಧೆಂಪೊ ಅವರ ಆಸ್ತಿ 998.83 ಕೋಟಿ ರೂ. ಹಾಗೂ ಅವರ ಒಟ್ಟು ಸಂಪತ್ತು 1,361 ಕೋಟಿಗಳಾಗಿದ್ದು, ಮೂರನೇ ಹಂತದ ಮತದಾನದ ಸಂದರ್ಭದಲ್ಲಿ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ಶ್ರೀನಿವಾಸ್ ಧೆಂಪೊ ಗೋವಾದ ಪ್ರಸಿದ್ಧ ಉದ್ಯಮಿ. ಪಲ್ಲವಿ ಶ್ರೀನಿವಾಸ್ ಅವರ ಪತ್ನಿ. ಅವರು ಪುಣೆಯ ಎಂಐಟಿಯಲ್ಲಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗೋವಾದ ವಿವಿಧೆಡೆ ವಾಣಿಜ್ಯ ಆಸ್ತಿಗಳಲ್ಲದೆ ಮುಂಬೈ, ಲಂಡನ್ ಮತ್ತು ದುಬೈನಲ್ಲಿ ಅಪಾರ್ಟ್ ಮೆಂಟ್ ಗಳನ್ನು ಹೊಂದಿದ್ದಾರೆ. ಗೋವಾ ಜತೆಗೆ ತಮಿಳುನಾಡು, ಚೆನ್ನೈನಲ್ಲಿ ಕೃಷಿ ಭೂಮಿ ಇದೆ.