ಪಣಜಿ: ಮಹಿಳೆ ಎಲ್ಲ ವಿಭಾಗದಲ್ಲಿಯೂ ಕೆಲಸ ಮಾಡುವಾಗ ಶೃದ್ಧೆಯಿಂದ ಮಾಡುತ್ತಾಳೆ. ಅಂತೆಯೇ ಮನೆಯಲ್ಲಿ ಸಂಸಾರಸ್ತೆಯಾಗಿಯೂ ಇರುತ್ತಾಳೆ. ಮಹಿಳೆಯರಿಗೆ ಸರಿಯಾದ ಗೌರವ ಕೊಡಬೇಕು. ಅವಳನ್ನು ಕೆಟ್ಟ ದೃಷ್ಠಿಯಿಂದ ನೋಡಬೇಡಿ, ಅವಳನ್ನು ಅವಮಾನಿಸಬೇಡಿ ಎಂದು ದೂರದರ್ಶನ ಚಂದನ ವಾಹಿನಿ ನಿರ್ದೇಶಕರು ಮತ್ತು ಮುಖ್ಯಸ್ಥೆ ಡಾ.ನಿರ್ಮಲಾ ಸಿ.ಯಲಿಗಾರ ಹೇಳಿದರು.
ಗೋವಾ ಕನ್ನಡ ಸಮಾಜ ಪಣಜಿ, ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ರಾಜಧಾನಿ ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಸರ್ಕಾರಿ ಪಾಲಿಟೆಕ್ನಿಕ್ ಪಣಜಿಯ ಮುಖ್ಯಸ್ಥ ಕೋಮಲ್ ಸ್ವಾರಸ್, ಗೋವಾ ಕನ್ನಡ ಮಹಿಳಾ ಮಂಡಳ ಮಡಗಾಂವ ಅಧ್ಯಕ್ಷೆ ಜಯಶ್ರೀ ಹೊಸ್ಮನಿ ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ಕನ್ನಡಿಗ ಜಿಎಸ್ ಬಾಬು ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷೆ ಸುಮತಿ ಜವಳಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಪ್ರಾಸ್ತಾವಿಕ ಮಾತನಾಡಿದರು. ಅಖಿಲಾ ಕುರಂದವಾಡ ಕಾರ್ಯಕ್ರಮ ನಿರೂಪಿಸಿದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಅರುಣಕುಮಾರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.