Advertisement

Panaji: ಅನುಚಿತವಾಗಿ ವರ್ತಿಸುವ ಮತ್ತು ದಾರಿ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ

03:25 PM Oct 05, 2023 | Kavyashree |

ಪಣಜಿ : ಸಮಾಜದಲ್ಲಿ ಧಾರ್ಮಿಕ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದ ಕೆಲವು ಸಮಾಜಘಾತುಕರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಆಕ್ಷೇಪಾರ್ಹ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ವಿಚಾರಗಳನ್ನು ಪೊಲೀಸ್ ಇಲಾಖೆಯಿಂದ ಪ್ರತಿನಿತ್ಯ ಗಮನಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆದ್ದರಿಂದ ಸಾರ್ವಜನಿಕರು ಇಂತಹ ದಾರಿ ತಪ್ಪಿಸುವ ವಿಚಾರಗಳಿಗೆ ಬಲಿಯಾಗಬಾರದು. ಅನುಚಿತವಾಗಿ ವರ್ತಿಸುವ ಮತ್ತು ದಾರಿ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ರಾಜ್ಯ  ಪೊಲೀಸ್ ಮಹಾನಿರ್ದೇಶಕ ಜಸ್ಪಾಲ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜನರು ಇಂತಹದ್ದಕ್ಕೆ ಬಲಿಯಾಗಿ ಮತ್ತೊಂದು ಪೋಸ್ಟ್ ಅನ್ನು ಪೋಸ್ಟ್ ಮಾಡಿದರೆ ಅಥವಾ ಅದನ್ನು ಬೆಂಬಲಿಸಲು ಪ್ರತಿಭಟನೆ ಮಾಡಿದರೆ ಈ ಸಮಾಜವಿರೋಧಿಗಳು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗುತ್ತಾರೆ. ಅದನ್ನೇ ಅವರು ಬಯಸುತ್ತಾರೆ. ಇಂತಹ ಸಮಾಜಘಾತುಕರನ್ನು ಬಂಧಿಸಲು ಜನರು ಪೊಲೀಸರೊಂದಿಗೆ ಸಹಕರಿಸಬೇಕು. ಅಂತಹ ಪ್ರಕರಣದ ತನಿಖೆಯನ್ನು ಅತ್ಯಂತ ಗೌಪ್ಯ ಮತ್ತು ತಾಂತ್ರಿಕ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಜಸ್ಪಾಲ್ ಸಿಂಗ್ ಹೇಳಿದರು.

ಸಮಾಜದಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯ ತಲೆದೋರಿರುವ ಬೆನ್ನಲ್ಲೇ ಕೆಲ ಸಾಮಾಜಿಕ ಕಾರ್ಯಕರ್ತರು ಹಳೇ ಪೋಸ್ಟ್ ಗಳನ್ನು ಬಳಸಿ ಅದಕ್ಕೆ ಕಿಚ್ಚು ಹಚ್ಚುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಹಳೆಯ ಪೋಸ್ಟ್ ಗಳಿಂದ ಸಾರ್ವಜನಿಕರ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಜನರು ಇದರ ಬಗ್ಗೆ ಎಚ್ಚರದಿಂದಿರಬೇಕು. ಅಂತಹ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುವ ಬದಲು, ಅಂತಹ ಘಟನೆಗಳ ಬಗ್ಗೆ ಪೊಲೀಸರಿಗೆ ವರದಿ ಮಾಡಬೇಕು ಎಂದು ಪೋಲಿಸ್ ಮಹಾ ನಿರ್ದೇಶಕ ಜಸ್ಪಾಲ್ ಸಿಂಗ್ ಜನತೆಯ ಬಳಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next