ಪಣಜಿ: ಬೆಂಗಳೂರು ಮೂಲದ ಅಕ್ಷಯಪಾತ್ರ ಫೌಂಡೇಶನ್ ಗೋವಾ ರಾಜ್ಯದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡುವ ಬಿಡ್ ಗೆದ್ದಿದೆ. ಅಕ್ಷಯಪಾತ್ರ ಫೌಂಡೇಶನ್ ಬಿಸಿಯೂಟ ವಿತರಣೆ ಪ್ರಾರಂಭಿಸಲು ಹಲವಾರು ವಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಕುರಿತು ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಸ್ವಸಹಾಯ ಸಂಘಗಳ ಮೂಲಕ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಆದರೆ, ಕೆಲವೆಡೆ ಆಹಾರ ವಿತರಣೆಯಲ್ಲಿ ವಿಳಂಬ ಹಾಗೂ ತೊಂದರೆಗಳ ಬಗ್ಗೆ ಸ್ವಸಹಾಯ ಸಂಘಗಳು ಶಿಕ್ಷಣ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದವು. ಹೀಗಾಗಿ 5 ಸಾವಿರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಬೇಕಿದ್ದಲ್ಲಿ ಇತರ ಕೆಲ ಸಾಮಾಜಿಕ ಸಂಸ್ಥೆಗಳನ್ನು ಟೆಂಡರ್ ಆಹ್ವಾನಿಸಲಾಗಿತ್ತು.
ಅಕ್ಷಯಪಾತ್ರೆ ಫೌಂಡೇಶನ್ ಬೆಂಗಳೂರು ಮತ್ತು ಸ್ತ್ರೀಶಕ್ತಿ ಬಿಡ್‍ಗೆ ಅಂತಿಮ ಸ್ಪರ್ಧಿಗಳಾಗಿದ್ದರು. ಇದರಲ್ಲಿ ಕೊನೆಯಲ್ಲಿ ಅಕ್ಷಯ ಪ್ರಾತ್ರ ಫೌಂಡೇಶನ್ ಬಿಡ್ ಗೆದ್ದಿದೆ. ಗೋವಾ ಸರಕಾರ ಕಡತಕ್ಕೆ ಅನುಮೋದನೆ ನೀಡಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಶೈಲೇಶ್ ಜಿಂಗಾಡೆ ತಿಳಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ಷಯಪಾತ್ರ ಫೌಂಡೇಶನ್ ವಿಜೇತವಾಗಿದೆ. ಗೋವಾದಲ್ಲಿ ಅವರು ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲು ಪ್ರಾರಂಭಿಸುತ್ತಾರೆ. ಬೆಂಗಳೂರಿನಲ್ಲಿರುವ ಅಕ್ಷಯಪಾತ್ರ ಫೌಂಡೇಶನ್ ದೇಶದ 24 ರಾಜ್ಯಗಳಲ್ಲಿ 50 ಮಿಲಿಯನ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸುತ್ತದೆ.
ಅಕ್ಷಯಪಾತ್ರ ಫೌಂಡೇಶನ್ ಮಧ್ಯಾಹ್ನದ ಊಟಕ್ಕೆ ಚಪಾತಿಯೊಂದಿಗೆ ಆಲೂಗಡ್ಡೆ ಬಾಜಿ, ಮಿಶ್ರ ತರಕಾರಿ ಇಡ್ಲಿ, ಚಪಾತಿಯೊಂದಿಗೆ ಹೆಸಿರು ಬೇಳೆ ಬಾಜಿ, ಮಿಶ್ರ ತರಕಾರಿ ಪುಲಾವ್, ಚೋಲೆ ಚಪಾತಿ, ಚಪಾತಿಯೊಂದಿಗೆ ಬಾಜಿ ಮತ್ತು ಚಪಾತಿಯೊಂದಿಗೆ ವೆಜ್ ಕುರ್ಮಾದ ಸಾಪ್ತಾಹಿಕ ಮೆನುವನ್ನು ಒದಗಿಸುತ್ತದೆ.