Advertisement

ಸ್ಫೋಟಕದ ಶೋಧಕ್ಕೆ ಬಂದಾಗ ಕಂಡಿದ್ದು ಪಾನ್‌ ಮಸಾಲಾ ಕವರ್‌ಗಳು!

03:50 AM Jul 16, 2017 | |

ಲಕ್ನೋ: ಜನಪ್ರತಿನಿಧಿಗಳ ಕುರ್ಚಿ ಕೆಳಗೇ ಸ್ಫೋಟಕ ದೊರೆತ ಕಾರಣಕ್ಕೆ ಎರಡು ದಿನಗಳಿಂದ ಸುದ್ದಿಯಲ್ಲಿದ್ದ ಉತ್ತರ ಪ್ರದೇಶ ವಿಧಾನಸಭೆ, ಶನಿವಾರ ಬೇರೆಯದೇ ಕಾರಣಕ್ಕೆ ದೇಶದ ಗಮನ ಸೆಳೆದಿದೆ. ಅದೇನೆಂದರೆ, ಶಕ್ತಿ ಕೇಂದ್ರದೊಳಗೆ ಸ್ಫೋಟಕ ತಂದವರನ್ನೇ ನಾಚಿಸುವಷ್ಟು ಪ್ರಮಾಣದ ಗುಟ್ಕಾ, ಪಾನ್‌ ಮಸಾಲಾ ಪ್ಯಾಕೆಟ್‌ಗಳು ಉ.ಪ್ರ ವಿಧಾನಸಭೆಯಲ್ಲಿ ದೊರೆತಿವೆ!

Advertisement

ವಿಧಾನಸಭೆಯಲ್ಲಿ ಇನ್ನೇನಾದರೂ ಸ್ಫೋಟಕ ಇರಬಹುದೇ ಎಂಬ ಅನುಮಾನದೊಂದಿಗೆ ತಪಾಸ ಣೆ ಗಿಳಿದ ಉಗ್ರ ನಿಗ್ರಹ ದಳದ ಸಿಬಂದಿ, ಕೈಯ್ಯಲ್ಲಿ ಸ್ಫೋಟಕ ಪತ್ತೆ ಸಾಧನ ಹಿಡಿದು ಕಟ್ಟಡದ ಮೂಲೆ ಮೂಲೆಯನ್ನೂ ಜಾಲಾಡುತ್ತಿದ್ದರು. ಹೀಗೆ ಹುಡುಕುವಾಗ ಅಲ್ಲಲ್ಲಿ ಸರ್‌-ಬರ್‌ ಸದ್ದಾಗುತ್ತಿತ್ತು. ಸ್ಫೋಟಕ ಇರಬಹುದೇನೋ ಎಂಬ ಅನುಮಾನ ದೊಂದಿಗೆ, ಸದ್ದು ಮಾಡಿದ ವಸ್ತುವನ್ನು ಕೈಗೆತ್ತಿ ಕೊಂಡು ನೋಡಿದರೆ ಅದು ಪಾನ್‌ ಮಸಾಲಾ ಪೊಟ್ಟಣ ವಾಗಿರುತ್ತಿತ್ತು. ತಪಾಸಣೆ ವೇಳೆ ಎಲ್ಲ ಸಿಬಂ ದಿಗೂ ಸಾಕಷ್ಟು ಬಾರಿ ಇಂಥ ಅನುಭವಾಯಿತು.

ಸ್ಫೋಟಕದ ಪುಡಿ ಸಿಕ್ಕ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶುಕ್ರವಾರ ಆದೇಶಿಸಿದ್ದರು. ಅದರಂತೆ ತಪಾಸಣೆ ಕಾರ್ಯ ಕೈಗೊಳ್ಳಲು ಉಗ್ರ ನಿಗ್ರಹ ದಳದ ಸಿಬಂದಿ ಶನಿವಾರ ವಿಧಾನಸಭೆ ಕಟ್ಟಡ ಪ್ರವೇಶಿಸಿದ್ದರು. ಈ ವೇಳೆ ಶಾಸಕರ ಕುರ್ಚಿಗಳ ಸಂದಿ, ಗೊಂದಿಗಳಲ್ಲಿ ಸಿಕ್ಕ ಗುಟ್ಕಾ, ಪಾನ್‌ ಮಸಾಲಾದ ಖಾಲಿ ಕವರ್‌ಗಳನ್ನು ಕಂಡು ಉಗ್ರ ನಿಗ್ರಹ ದಳ ನಿಬ್ಬೆರಗಾಯಿತು! ಇದೇ ವೇಳೆ ತಪಾಸಣೆ ನಡೆಸುತ್ತಿದ್ದ ತಂಡಕ್ಕೆ ಮೆಗ್ನೇಶಿಯಂ ಸಲ್ಫೆàಟ್‌ ಇರುವ ಪೊಟ್ಟಣ ಕೂಡ ಸಿಕ್ಕಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಉತ್ತರಪ್ರದೇಶ ವಿಧಾನಸಭೆ ಕಟ್ಟಡವನ್ನು ಸ್ವತ್ಛ ಗೊಳಿಸುತ್ತಿದ್ದ ಸಿಬ್ಬಂದಿಗೆ ಜು.12ರಂದು ಬಿಳಿ ಬಣ್ಣದ ಪುಡಿ ಇದ್ದ ಪೊಟ್ಟಣ ದೊರೆತಿತ್ತು. ಪ್ರಯೋಗಾಲ ಯದಲ್ಲಿ ಪರೀಕ್ಷಿಸಿದ ನಂತರ ಅದು “ಪೆಂಟಾರಿಥಿರಿ ಟೋಲ್‌ ಟೆಟ್ರಾನಿಟ್ರೇಟ್‌’ ಎಂಬ ಸ್ಫೋಟಕ ಎಂದು ದೃಢಪಟ್ಟಿತ್ತು. ಇದೀಗ ತಪಾಸಣೆ ಉದ್ದೇಶದಿಂದ ವಿಧಾನಸಭೆ ಕಟ್ಟಡಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದ್ದು, ಯಾರೊಬ್ಬರೂ ಕಟ್ಟಡ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಯುಪಿ ವಿಧಾನಸಭೆಗೆ ಸರ್ಪಗಾವಲು
ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನೆ°ಲೆಯಲ್ಲಿ ಉತ್ತರಪ್ರದೇಶ ವಿಧಾನಸಭೆಗೆ ಭಾರೀ ಭದ್ರತೆ ಒದಗಿಸಲಾಗಿದೆ. ವಿಧ್ವಂಸಕ ಕೃತ್ಯ ನಿಗ್ರಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಡೀ ಸದನಕ್ಕೆ ಸಮಗ್ರ ಭದ್ರತೆ ಒದಗಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಹೆಚ್ಚುವರಿ ಡಿಜಿಪಿ ಆನಂದ್‌ ಕುಮಾರ್‌ ಹೇಳಿದ್ದಾರೆ. ಸದ್ಯದಲ್ಲೇ ಅಣಕು ಭದ್ರತಾ ಪ್ರದರ್ಶನ ಮಾಡಲಾಗುವುದು. ಸದನದ ಆವರಣದಲ್ಲಿ ಕ್ಷಿಪ್ರ ಕಾರ್ಯಪಡೆ, ಉಗ್ರ ನಿಗ್ರಹ ಪಡೆಯನ್ನು ನಿಯೋಜಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next