Advertisement

ಹಂಪ ನಾಗರಾಜಯ್ಯ ಪಂಪ ಪ್ರಶಸ್ತಿಗೆ ಆಯ್ಕೆ

03:45 AM Jan 12, 2017 | |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ 2016ನೇ ಸಾಲಿನಲ್ಲಿ ಸಾಹಿತಿ, ಸಂಶೋಧಕ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಹಂ.ಪ. ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. 

Advertisement

ಜೊತೆಗೆ 2016ನೇ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಸಂತ ಶಿಶುನಾಳ ಷರೀಫ‌ ಪ್ರಶಸ್ತಿ, ಶ್ರೀ ನಿಜಗುಣ ಪುರಂದರ ಪ್ರಶಸ್ತಿ ಹಾಗೂ ಕುಮಾರವ್ಯಾಸ ಪ್ರಶಸ್ತಿಗಳನ್ನೂ ಘೋಷಣೆ ಮಾಡಲಾಗಿದೆ. 

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಶಾಂತಿ ನಾಯಕ, ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡು ಸಾಹಿತ್ಯ ಪ್ರಶಸ್ತಿಗೆ ಹಸನ್‌ ನಯೀಂ ಸುರಕೋಡ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಡಾ. ಚೆನ್ನಣ್ಣ ವಾಲಿಕಾರ, ಸಂತ ಶಿಶುನಾಳ ಷರೀಫ‌ ಪ್ರಶಸ್ತಿಗೆ ವೈ.ಕೆ. ಮುದ್ದುಕೃಷ್ಣ, ಶ್ರೀ ನಿಜಗುಣ ಪುರಂದರ ಪ್ರಶಸ್ತಿಗೆ ಗಣಪತಿ ಭಟ್‌ ಹಾಸಣಗಿ ಹಾಗೂ ಕುಮಾರವ್ಯಾಸ ಪ್ರಶಸ್ತಿಗೆ ಎನ್‌.ಆರ್‌. ಜ್ಞಾನಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. 

ಎಲ್ಲ ಪ್ರಶಸ್ತಿಗಳ ನಗದು ಮೊತ್ತವು ತಲಾ 3 ಲಕ್ಷ ರೂ. ಇದ್ದು, ಇದರ ಜೊತೆಗೆ ಪುರಸ್ಕಾರ, ಸ್ಮರಣಿಕೆ, ಪ್ರಶಸ್ತಿ ಫ‌ಲಕ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next