Advertisement

ಬಜಕೂಡ್ಲು: ಈಶಾ ವನದಲ್ಲಿ ವನಮಹೋತ್ಸವ

01:25 AM Jul 11, 2017 | Team Udayavani |

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಈಶಾ ವನದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಕಾಸರಗೋಡು ವಲಯ ಎಣ್ಮಕಜೆ ಗ್ರಾಮ ಪಂಚಾಯತ್‌, ಎಸ್‌.ಎನ್‌. ನೇಚರ್‌ ಕ್ಲಬ್‌, ಎಸ್‌.ಎನ್‌.ಎಚ್‌.ಎಸ್‌. ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರಗಿತು.

Advertisement

ಬಜಕೂಡ್ಲು ಮಹಾಲಿಂಗೇಶ್ವರ ಕ್ಷೇತ್ರ ಸಭಾ ಭವನದಲ್ಲಿ ಎಣ್ಮಕಜೆ ಪಂಚಾಯತ್‌ ಅಧ್ಯಕ್ಷೆ ರೂಪವಾಣಿ ಆರ್‌.ಭಟ್‌ ಅಧ್ಯಕ್ಷತೆ ವಹಿಸಿ ಪ್ರಕೃತಿ ನಮೆಗೆಲ್ಲವನ್ನು ಕೊಡುತ್ತಿದೆ. ಆದರೆ ನಾವು ಪ್ರಕೃತಿಗೇನೂ ಕೊಡೋದಿಲ್ಲ. ಮರಗಳನ್ನು ಕಡಿದ ಪಾಪ ಗಿಡ ನೆಡುವ ಮೂಲಕ ಪರಿಹಾರವಾಗುತ್ತದೆ. ಪರಿಸರವನ್ನು ಉಳಿಸಿ ಬೆಳಸಬೇಕಾದುದು ನಮ್ಮ ದೈನಂದಿನ ಚಟುವಟಿಕೆಗಳಾಗಿ ಬದಲಾದಾಗ ವನಸಂರರಕ್ಷಣೆ ತಾನಾಗಿಯೇ ನಡೆಯುತ್ತದೆ ಎಂದರು.

ಕಾಸರಗೋಡು ಜಿಲ್ಲಾಧಿಕಾರಿ ಜೀವನ್‌ ಬಾಬು ಕೆ. ಕಾರ್ಯ ಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿದರು. ಪರಿಸರ ನಮಗೊಂದು ವರ. ಪ್ರಾಣಿಗಳು ಪಕ್ಷಿಗಳು ಸೇರಿದಂತೆ ಜೀವ ರಾಶಿಗಳು ಜೀವಿಸಬೇಕಾದರೆ ಮರಗಳನ್ನು ನೆಟ್ಟರೆ ಸಾಲದು. ಅದನ್ನು ಪೋಷಿಸಿ ಬೆಳೆಸುವ ಮಹತ್ತರವಾದ ಕಾರ್ಯಗಳು ನಡೆಯಬೇಕಾದುದು, ನಡೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವು ಹೌದು. ಈ ನಿಟ್ಟಿನಲ್ಲಿ  ಈಶವನದಂತಹ ಪರಿಸರ ಸೇವೆ ಸಾರ್ಥಕ್ಯ ಮತ್ತು ಶ್ಲಾಘನೀಯವಾದುದು. ಉಳಿದ ಸಂಘ ಸಂಸ್ಥೆಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಬಜಕೂಡ್ಲಿನ ಈಶವನ ಮಾದರಿಯಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಕಾಸರ ಗೋಡು ವಲಯ ಅಧಿಕಾರಿ ಪಿ.ಬಿಜು, ಎಂ.ಜೋಷಿಲ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬಜಕೂಡ್ಲು ಇದರ ಆಡಳಿತ ಮೊಖೆ¤àಸರರಾದ ಕೃಷ್ಣ ಶ್ಯಾನ್‌ಭೋಗ್‌ ಗೌರವ ಉಪಸ್ಥಿತರಿದ್ದರು. ಪುಟ್ಟಪ್ಪ ಕೆ. ಖಂಡಿಗೆ, ಎಣ್ಮಕಜೆ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಉದಯ ಚೆಟ್ಟಿಯಾರ್‌, ಆಯಿಷಾ ಎ.ಎ., ಎಸ್‌.ಎನ್‌.ಎಚ್‌.ಎಸ್‌.ನ ಸುಬ್ರಹ್ಮಣ್ಯ, ಜೆ.ಬಿ.ಡಿ.ಒ. ನೂತನ ಕುಮಾರಿ, ಮಲ್ಲಿಕಾ ರೈ ಉಪಸ್ಥಿತರಿದ್ದು ಶುಭಾಸಂಶನೆ ನೀಡಿದರು. ಅಧ್ಯಾಪಕ ಕೃಷ್ಣ ಪ್ರಸಾದ್‌ ಕಾರ್ಯ ಕ್ರಮ ನಿರೂಪಿಸಿದರು. ಪಂಚಾಯತ್‌ ಕಾರ್ಯದರ್ಶಿ ಅಜಯ್‌ ಕುಮಾರ್‌ ಸ್ವಾಗತಿಸಿದರು. ಎಸ್‌.ಎನ್‌.ಎಚ್‌.ಎಸ್‌.ನಅಧ್ಯಾಪಕ, ನೇಚರ್‌ ಕ್ಲಬ್‌ ಮತ್ತು ಈಶ ವನದ ರೂವಾರಿ ಉಮೇಶ್‌ ಕೆ. ಪೆರ್ಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next