ಬೆಳ್ಮಣ್: ಶ್ರದ್ಧೆಯಿಂದ ಮಾಡಿದ ಪೂಜೆ, ಸೇವೆಗಳು ಫಲ ನೀಡುತ್ತವೆ. ಅಚಲ ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಹೇಳಿದರು.
ಅವರು ರವಿವಾರ ಶ್ರೀಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪುರಾತನ ಆಲಡೆ ಸಾನ್ನಿಧ್ಯಗಳ ಪ್ರತಿಷ್ಠಾಪನೆಯ ಪ್ರಯುಕ್ತ ನಡೆದ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾ ಮಹಾಯಾಗದ ಸಂದರ್ಭ “ಮಾತೃ ಸಂಗಮ’ದಲ್ಲಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಖರ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು, ಉಡುಪಿ ಜಿಲ್ಲಾ ಅಬಕಾರಿ ಉಪಆಯುಕ್ತರಾದ ರೂಪಾ ಎಂ., ಮಣಿಪಾಲ ಕೆಎಂಸಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ| ಅಖೀಲಾ ವಾಸುದೇವ, ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ| ಅಂಜಲಿ ಸುನಿಲ್, ಡಾ| ರಾಜೇಶ್ವರೀ ಕೊರಡ್ಕಲ್ ಮೂಡುಬೆಳ್ಳೆ, ಡಾ| ಅಂಜಲಿ ಬೋರ್ಕರ್ ಮೂಡುಬೆಳ್ಳೆ, ಮಣಿಪಾಲ ಆರ್‌ಎಸ್‌ಬಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ಎಸ್. ನಾಯಕ್ ಅಂಬಲಪಾಡಿ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು, ತಾ.ಪಂ. ಮಾಜಿ ಸದಸ್ಯೆ ವಿದ್ಯಾ ಎಂ. ಸಾಲಿಯಾನ್ ಪಳ್ಳಿ ಮುಖ್ಯ ಅತಿಥಿಗಳಾಗಿದ್ದರು.
ಕ್ಷೇತ್ರದ ಸುಮಂಗಲಾ ಪುಂಡಲೀಕ ನಾಯಕ್ ಅತಿಥಿಗಳನ್ನು ಗೌರವಿಸಿದರು. ಮಲ್ಲಿಕಾ ರೂಪೇಶ್ ಸ್ವಾಗತಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು. ಅಕ್ಷಯಾ ಅರುಣ್ ವಂದಿಸಿದರು.