ಪುಣೆ: ಗೋವಾ ಚುನಾವಣಾ ಇತಿಹಾಸದಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಅಭ್ಯರ್ಥಿ ಡೆಂಪೋ ಇಂಡಸ್ಟ್ರೀಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೋ (49ವರ್ಷ), ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಗೋವಾದಿಂದ ಕಣಕ್ಕಿಳಿಯಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:IPL 2024: ಅಭಿಮಾನಿಗಳ ಟೀಕೆಗೆ ಕಾರಣವಾಯ್ತು ಭೋಜ್‌ಪುರಿ ಕಾಮೆಂಟರಿ; ವಿಡಿಯೋ
ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಸೋಮವಾರ (ಮಾರ್ಚ್ 25) ಬಿಡುಗಡೆಗೊಳಿಸಿರುವ 111 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪಲ್ಲವಿ ಡೆಂಪೋ ಹೆಸರನ್ನು ಘೋಷಿಸಿದೆ.
ಗೋವಾದ ವಾಣಿಜ್ಯೋದ್ಯಮಿ, ಶಿಕ್ಷಣ ತಜ್ಞೆ ಪಲ್ಲವಿ ಡೆಂಪೋ ಅವರು ರಸಾಯನಶಾಸ್ತ್ರ ಪದವಿಧರೆಯಾಗಿದ್ದು, ಪುಣೆಯ ಎಂಐಟಿಯಿಂದ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಲ್ಲವಿ ಡೆಂಪೋ ಇಂಡಸ್ಟ್ರೀಸ್ ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷಿಣ ಗೋವಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಫ್ರಾನ್ಸಿಸ್ಕೋ ಸರ್ದಿನ್ಹಾ ಅವರು ಪ್ರತಿನಿಧಿಸುತ್ತಿದ್ದು, 1962ರ ನಂತರ ಬಿಜೆಪಿ ಕೇವಲ ಒಂದು ಬಾರಿ ಮಾತ್ರ ಈ ಕ್ಷೇತ್ರದಲ್ಲಿ ಜಯಗಳಿಸಿತ್ತು.
1999ರಲ್ಲಿ ದಕ್ಷಿಣ ಗೋವಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆದಿತ್ತು. ಡೆಂಪೋ ಪತಿ ಶ್ರೀನಿವಾಸ್ ಡೆಂಪೋ ಪ್ರಸಿದ್ಧ ಕೈಗಾರಿಕೋದ್ಯಮಿಯಾಗಿದ್ದು, ಅವರು ಗೋವಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷರಾಗಿದ್ದಾರೆ ಎಂದು ವರದಿ ತಿಳಿಸಿದೆ.