Advertisement

ವಡಾಲದ ಶ್ರೀ ರಾಮ ಮಂದಿರದಲ್ಲಿ ಪಲ್ಲಕಿ ಉತ್ಸವ

11:02 AM Apr 30, 2019 | Vishnu Das |

ಮುಂಬಯಿ: ವಡಾಲದ ಶ್ರೀ ರಾಮ ಮಂದಿರದಲ್ಲಿ ಪಲ್ಲಕಿ ಉತ್ಸವವು ಎ. 27ರಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಪೂಜಾ ಕೈಂಕರ್ಯಗಳೊಂದಿಗೆ ಜರಗಿತು. ವಸಂತೋತ್ಸವದ ಅಂಗವಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಇದರ ಮಾಜಿ ಕಾರ್ಯಾಧ್ಯಕ್ಷ, ಟ್ರಸ್ಟಿ ಎನ್‌. ಎನ್‌. ಪಾಲ್‌, ಮಾಜಿ ಕಾರ್ಯಾಧ್ಯಕ್ಷ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗೋವಿಂದ ಎಸ್‌. ಭಟ್‌, ಜಿಎಸ್‌ಬಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಡಾಲ ಇದರ ಟ್ರಸ್ಟಿಗಳಾದ ಉಮೇಶ್‌ ಪೈ ಮತ್ತು ಶಾಂತಾರಾಮ ಭಟ್‌, ವಡಾಲದ ಮಠದ ಮಾಜಿ ಕಾರ್ಯಾಧ್ಯಕ್ಷ ನಾಗೇಶ್‌ ಫಾವ್ಕರ್‌, ವಡಾಲ ಮಠದ ವಕ್ತಾರ ಕಮಲಾಕ್ಷ ಸರಾಫ್‌ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆಯಿಂದ ವಿವಿಧ ಪೂಜೆಗಳು, ವಿಶೇಷ ಸೇವಾ ಪೂಜೆಗಳು ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ವಡಾಲ ಮಠ ಮತ್ತು ಶ್ರೀರಾಮ ಸೇವಕ ಮಂಡಳದ ಕಾರ್ಯಕರ್ತರಾದ ಚಂದ್ರಕಾಂತ್‌ ಹಾಗೂ ಮೊದಲಾದವರ ಸೇವಾರ್ಥವಾಗಿ ಪಲ್ಲಕ್ಕಿ ಉತ್ಸವ ಜರಗಿತು. ಭಕ್ತಾದಿಗಳು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಪ್ರಧಾನ ಅರ್ಚಕ ವೇದಮೂರ್ತಿ ಗೋವಿಂದ ಭಟ್‌ ಅವರಿಂದ ರಾಮ ಮತ್ತು ಲಕ್ಷ್ಮಣ, ಸೀತಾ ದೇವಿಗೆ ಮಹಾಮಂಗಳಾರತಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next