Advertisement

ಪಲಿಮಾರು ಪರ್ಯಾಯದ ಭತ್ತ ಮುಹೂರ್ತ

12:36 PM Dec 08, 2017 | |

ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಜ. 18 ರಂದು ಪರ್ಯಾಯ ಪೀಠವೇರಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಭತ್ತ ಮುಹೂರ್ತವು ಡಿ. 7ರಂದು ಶ್ರೀಕೃಷ್ಣ ಮಠದ ಬಡಗು ಮಾಳಿಗೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

Advertisement

ಭತ್ತ ಮುಹೂರ್ತದ ಪ್ರಯುಕ್ತ ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ಜರಗಿದವು. ನವಗ್ರಹ ಆರಾಧನೆ, ನರಸಿಂಹ ದೇವರ ಪೂಜೆ, ಪಲಿಮಾರು ಮೂಲ ಮಠದಲ್ಲಿ ವಿಷ್ಣು ಸಹಸ್ರನಾಮ ಪಠನ, ರಾಮದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅನಂತರ ಚಂದ್ರೇಶ್ವರ, ಅನಂತೇಶ್ವರ ದೇವರಿಗೆ, ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪಲಿಮಾರು ಮಠದಿಂದ ಐದು ಭತ್ತದ ಮುಡಿಗಳನ್ನು ಹೊತ್ತು ಮೆರವಣಿಗೆ ಮೂಲಕ ಶ್ರೀಕೃಷ್ಣ ಮಠದ ಬಡಗು ಮಾಳಿಗೆಗೆ ಆಗಮಿಸಿ, ಬಳಿಕ ಮುಹೂರ್ತ ನೆರವೇರಿಸಲಾಯಿತು. 

ಅಷ್ಟ ಮಠಗಳ ಪ್ರತಿನಿಧಿಗಳಿಗೆ ಮತ್ತು ವಿದ್ವಾಂಸರಿಗೆ ದಾನ ನೀಡಲಾಯಿತು. ಹೆರ್ಗ ವೇದವ್ಯಾಸ ಭಟ್‌ ಅವರ ನೇತೃತ್ವದಲ್ಲಿ ಭತ್ತ ಮುಹೂರ್ತ ಹಾಗೂ ಚಪ್ಪರ ಮುಹೂರ್ತಗಳ ವಿಧಿವಿಧಾನಗಳು ನಡೆದವು.

ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಅವರು ಭತ್ತ ಮುಹೂರ್ತದ ಮಹತ್ವವನ್ನು ತಿಳಿಸಿದರು. ಹಿಂದಿನಿಂದಲೂ ಪರ್ಯಾಯ ಪೂರ್ವಭಾವಿಯಾಗಿ ನಾಲ್ಕು ಅಧಿಕೃತ ಮುಹೂರ್ತಗಳನ್ನು ನೆರವೇರಿಸುವ ಸಂಪ್ರದಾಯ ನಡೆದು ಬಂದಿವೆ. ಶತಮಾನಗಳ ಹಿನ್ನೆಲೆ ಇರುವ ಈ ನಾಲ್ಕು ಮುಹೂರ್ತಗಳ
ಪ್ರಮುಖ ಉದ್ದೇಶ ಅನ್ನದಾನ. ಬಾಳೆ, ಅಕ್ಕಿ, ಕಟ್ಟಿಗೆ, ಭತ್ತ ಇವು ಅನ್ನದಾನಕ್ಕೆ ಅಗತ್ಯವಾದ ಪ್ರಮುಖ ಮೂಲವಸ್ತುಗಳು. ಪರ್ಯಾಯಕ್ಕೆ ಒಂದು ವರ್ಷ ಮುನ್ನವೇ ಈ ಮುಹೂರ್ತಗಳಿಗೆ ಚಾಲನೆ ನೀಡಲಾಗುತ್ತದೆ. ದೀಪಾವಳಿಯ ಅನಂತರ ಕಟಾವಾಗುವ ಭತ್ತವನ್ನು ಬಳಸಿ ಭತ್ತ ಮುಹೂರ್ತ ನೆರವೇರಿಸಲಾಗುತ್ತದೆ. ಇದನ್ನು ದಾಸ್ತಾನು ಮಾಡಿ ಪರ್ಯಾಯ ಸಂದರ್ಭ ಅನ್ನದಾನ ನಡೆಸಲಾಗುತ್ತದೆ ಎಂದರು.

ಈ ಬಾರಿ ಪರ್ಯಾಯ ಉತ್ಸವಕ್ಕೆ ಸಂಬಂಧಿಸಿ ಚಪ್ಪರ ಮುಹೂರ್ತ ನೆರವೇರಿಸಲಾಗಿದೆ. ಇದು ಪರ್ಯಾಯ ಪ್ರಕ್ರಿಯೆಗೆ ಪೂರ್ತಿ ವೇಗ ನೀಡುತ್ತದೆ ಎಂದರು.  ಪಲಿಮಾರು ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ ಮಾಹಿತಿ ನೀಡಿ, ಪಲಿಮಾರು ಶ್ರೀಪಾದರು ಹಲವು ಯೋಜನೆಗಳನ್ನು ಹೊಂದಿದ್ದಾರೆ. ಶ್ರೀಗಳು ಮುಂಬಯಿ, ಚೆನ್ನೈ, ಮಂತ್ರಾಲಯಗಳಿಗೆ ಯಾತ್ರೆ ಕೈಗೊಂಡಿದ್ದು, ಜ. 3ರಂದು ಪುರಪ್ರವೇಶ ಮಾಡಲಿದ್ದಾರೆ ಎಂದರು.

Advertisement

ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ನಿ.ಬೀ. ವಿಜಯ ಬಲ್ಲಾಳ್‌, ವೆಂಕಟರಮಣ ಮುಚ್ಚಿಂತಾಯ, ಮುಚ್ಚಾರು ರಾಮಚಂದ್ರ ಭಟ್‌, ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಸಗ್ರಿ ಗೋಪಾಲಕೃಷ್ಣ ಸಾಮಗ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್‌ ಕುಮಾರ್‌ ಕಲ್ಕೂರ, ಮಟ್ಟಿ ಲಕ್ಷ್ಮೀನಾರಾಯಣ ರಾವ್‌, ಭುವನಾಭಿರಾಮ ಉಡುಪ, ಎಂ.ಬಿ. 

ಉಡುಪಿ: ಪಲಿಮಾರು ಮಠದ ಪರ್ಯಾಯಪೂರ್ವ ಭತ್ತ ಮುಹೂರ್ತವು ಗುರುವಾರ ನೆರವೇರಿತು. ಪುರಾಣಿಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next