Advertisement

ಪಲಿಮಾರು ಮೂಲ ಮಠದಲ್ಲಿ ಹನುಮಜ್ಜಯಂತಿ ಮಹೋತ್ಸವ

03:40 PM Apr 13, 2017 | |

ಪಡುಬಿದ್ರಿ: ಜ್ಯೋತಿಷ ಶಾಸ್ತ್ರ ಹೇಳುವವರ ಹಾವಳಿಯಿಂದಾಗಿ ಜ್ಯೋತಿಷ ಶಾಸ್ತ್ರವು ಮೌಲ್ಯ ಕಳಕೊಳ್ಳುತ್ತಿದೆ. ಯಾವುದನ್ನೂ ಅರ್ಧ ಕಲಿತು ವಿದ್ಯೆಗೆ ಅಪಚಾರವೆಸಗಬಾರದು. ಈ ನಿಟ್ಟಿನಲ್ಲಿ ಮುಂದಿನ ಪರ್ಯಾಯ ಕಾಲದಲ್ಲಿ ಪಲಿಮಾರು ಮಠದಿಂದ 16ತಿಂಗಳುಗಳ ಕಾಲ ಏಕಾದಶಿಯಂದು ನಾಡಿನ ಎಲ್ಲ ಪುರೋಹಿತರ ಸಹಕಾರದಿಂದ ಶ್ರೀಕೃಷ್ಣ ಮಠದಲ್ಲಿ ಪುರೋಹಿತ ಗೋಷ್ಠಿಗಳನ್ನು ನಡೆಸುವ ಮೂಲಕ ಹೆಚ್ಚಿನ ಸಂದೇಹಗಳನ್ನು ಪರಿಹರಿಸುವ ತಮ್ಮ ಯೋಜನೆಯನ್ನು ಶ್ರೀ ಪಲಿಮಾರು ಮಠ ಯೋಗದೀಪಿಕಾ ವಿದ್ಯಾಪೀಠ ಕುಲಪತಿ, ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.

Advertisement

ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ಪಲಿಮಾರು ಮೂಲ ಮಠದಲ್ಲಿನ ಶ್ರೀ ಹನುಮಜ್ಜಯಂತಿ ಮಹೋತ್ಸವದಲ್ಲಿ ಉಡುಪಿ ಶಿವಳ್ಳಿ ಬ್ರಾಹ್ಮಣಪುರೋಹಿತ ಸಂಘ ಇದರ ಸಹಯೋಗದೊಂದಿಗೆ ಷೋಡಶ ಸಂಸ್ಕಾರ ವಿಷಯಾಧಾರಿತ ಪುರೋಹಿತ ಗೋಷ್ಠಿಯ ಕಾರ್ಯಕ್ರಮದಲ್ಲಿ ತಮಿಳುನಾಡು ಶ್ರೀರಂಗಮ್‌ ಅವದಾನಿ ವೇ | ಮೂ | ಭೀಮಾಚಾರ್ಯ ಅವರಿಗೆ ಶ್ರೀರಾಜರಾಜೇಶ್ವರ ತೀರ್ಥ ಪ್ರಶಸ್ತಿಯನ್ನಿತ್ತು ಅನುಗ್ರಹಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆವಹಿಸಿದ್ದ ಶ್ರೀ ಸೋದೆ ವಾದಿರಾಜ ಮಠ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಠ, ದೇವಸ್ಥಾನಗಳಂತಹ ಧಾರ್ಮಿಕ  ಕೇಂದ್ರಗಳಲ್ಲಿ ಆಯೋಜಿಸುವ ಪುರೋಹಿತ ಘೋಷ್ಠಿಗಳ ಮೂಲಕ ಹುಟ್ಟಿನ ಹಿಂದಿನ  ಸಂಸ್ಕಾರಗಳ ಬಗ್ಗೆ ಅರಿವು ನೀಡುವ ಹಾಗೂ ಷೋಡಶ ಸಂಸ್ಕಾರಗಳ ಬಗ್ಗೆ ಜಾಗƒತಿ  ಮೂಡುವಂತಾಗಲಿ ಎಂದರು.

ಭಗವಂತನನ್ನು ಕಾಣುವಲ್ಲಿ ಸಹಕಾರಿಯಾಗುವ ಸಂಸ್ಕಾರಯುತ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೆಕು. ಪರಂಪರೆಯನ್ನು ಉಳಿಸುವ ಕೆಲಸವಾಗಲಿ. ನಮ್ಮ ವರ್ಗ ಮುಂದೆಯೂ ಸಮಜಕ್ಕೆ ಮಾರ್ಗದರ್ಶಕರಾಗುವಂತಾಗಲಿ ಎಂದು ಅದಮಾರು ಮಠ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪುರೋಹಿತ ಗೋಷ್ಠಿಯ ನಿರ್ವಾಹಕ ಅಧ್ಯಕ್ಷತೆಯನ್ನು ಉಡುಪಿಯ ವಿ| ಜಿ.ಸುಬ್ರಹ್ಮಣ್ಯ ಭಟ್‌ ಅವಧಾನಿಗಳು ವಹಿಸಿದ್ದರು.ಶಿವಳ್ಳಿ ಬ್ರಾಹ್ಮಣಪುರೋಹಿತ ಸಂಘ ಅಧ್ಯಕ್ಷ ವಿ| ಅಗ್ರಹಾರ ಲಕ್ಷ್ಮೀನಾರಾಯಣ ತಂತ್ರಿ ಸ್ವಾಗತಿಸಿದರು. ವಿ| ರವೀಂದ್ರ ಹೆರ್ಗ ಪ್ರಬಂಧ ಮಂಡಿಸಿದರು. ತತ್ವ ಸಂಶೋಧನ ಸಂಸತ್‌ ನಿರ್ದೇಶಕ ಡಾ| ವಂಶೀಕೃಷ್ಣಾಚಾರ್ಯ ಪುರೋಹಿತ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next