Advertisement
ಎರಡು ತಿಂಗಳಿನಿಂದ ನಿರಂತರ ಕೆಲಸ ಪರ್ಯಾಯದ ಹಿನ್ನೆಲೆಯಲ್ಲಿ ಪೈಂಟಿಂಗ್ ಹಾಗೂ ಇತರ ಕೆಲವು ಸಿವಿಲ್ ಕಾಮಗಾರಿಗಳು ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ. ಶ್ರೀಕೃಷ್ಣ ಮಠ, ಭೋಜನ ಶಾಲೆ, ಒಳಭಾಗದ ಕೆಲವು ಛತ್ರಗಳಲ್ಲಿ ಪೈಂಟಿಂಗ್ ಪೂರ್ಣಗೊಂಡಿದೆ. ಪಲಿಮಾರು ಮಠದ ಹಿಂಭಾಗದಲ್ಲಿ ಸಿವಿಲ್ ಕೆಲಸ ಹಾಗೂ ಪೈಂಟಿಂಗ್ ಬಾಕಿಯಿದೆ. ಮೂರ್‍ನಾಲ್ಕು ದಿನಗಳ ಒಳಗಾಗಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದೆ. ಪ್ರತಿದಿನ 15 ರಿಂದ 20 ಮಂದಿ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. 25-30 ಲಕ್ಷ ರೂ. ವೆಚ್ಚದಲ್ಲಿ ಪೈಂಟಿಂಗ್ ನಡೆಸಲಾಗಿದೆ. ವೆಂಕಟೇಶ್ ಶೇಟ್, ಆನಂದ್ ಹಾಗೂ ಜನಾರ್ದನ್ ಅವರ ನೇತೃತ್ವದಲ್ಲಿ ಪೈಂಟಿಂಗ್ ನಡೆಯುತ್ತಿದೆ.
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಿರಂತರ ಭಜನಾ ಸೇವೆ ನಡೆಯಲಿದ್ದು, ಭಜನಾ ಸೇವೆ ನಡೆಸಿಕೊಡಲು ವಿವಿಧ ಭಾಗಗಳಿಂದ ಆಗಮಿಸುವವರಿಗೆ ವಾಸ್ತವ್ಯಕ್ಕಾಗಿ ಪಲಿಮಾರು ಮಠದ ಹಿಂಭಾಗದಲ್ಲಿರುವ ಸ್ಥಳವನ್ನು ವಾಸ್ತವ್ಯಕ್ಕೆ ಪೂರಕವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಶೌಚಾ ಲಯ, ಸ್ನಾನಗೃಹ ನಿರ್ಮಾಣದ ಕಾಮ ಗಾರಿಯೂ ನಡೆಯುತ್ತಿದೆ. ವಿದ್ಯಾಮಾನ್ಯ ಸಭಾಗೃಹದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಕೆಲಸ ಶೀಘ್ರವೇ ಮುಗಿಯಲಿದೆ. ಸುಮಾರು 12 ಸಾವಿರ ಲೀ. ನೀರು ತುಂಬಿಸುವಂತಹ ನೀರಿನ ಟ್ಯಾಂಕ್ ಕೂಡ ಮಠದ ಹಿಂಭಾಗದಲ್ಲಿ ನಿರ್ಮಿಸಲಾಗುತ್ತಿದೆ. ಪಲಿಮಾರು ಮಠದ ಮುಂಭಾಗದ ದ್ವಾರದ ಎರಡು ಭಾಗಗಳಲ್ಲಿ ಪುರುಷೋತ್ತಮ ಅಡ್ವೆ ಅವರಿಂದ ಜಯ-ವಿಜಯ ದ್ವಾರಪಾಲಕ ರಚನೆಯಾಗಲಿದೆ. ವಿಜಯ ನಗರದ ಕಾವಿ ಚಿತ್ರಕಲಾ ಶೈಲಿಯಲ್ಲಿ ಇದು ಮೂಡಿಬರಲಿದೆ. ಮೂರ್‍ನಾಲ್ಕು ದಿನದ ಒಳಗಾಗಿ ಚಿತ್ರಕಲಾ ರಚನೆ ಮುಗಿಯಲಿದೆ.
Related Articles
ವೆಂಕಟೇಶ್ ಶೇಟ್, ಪೈಂಟಿಂಗ್ ಉಸ್ತುವಾರಿ
Advertisement