Advertisement

Palghar: 3.90 ಲಕ್ಷ ರೂ. ಮೌಲ್ಯದ ಬ್ರೌನ್‌ ಶುಗರ್‌ ಸಹಿತ ಇಬ್ಬರ ಬಂಧನ

05:38 PM Nov 04, 2023 | Shreeram Nayak |

ಪಾಲ್ಘರ್: ಇಲ್ಲಿನ ವಿರಾರ್‌ ಪರಿಸರದಲ್ಲಿ ಸುಮಾರು 3.90 ಲಕ್ಷ ರೂ. ಮೌಲ್ಯದ ಬ್ರೌನ್‌ ಶುಗರ್‌ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಆರೋಪಿಗಳನ್ನು ಅಮೀರ್‌ ಜಾಕರ್‌ ಖಾನ್‌ (35) ಮತ್ತು ಹರೇಶ್‌ ಮನೋಜ್‌ ಪಾಟೀಲ್‌ (29) ಎಂದು ಗುರುತಿಸಲಾಗಿದೆ.

ವಿರಾರ್‌ನ ಮನ್ವೇಲ್‌ಪಾಡಾದಲ್ಲಿರುವ ಹೊಟೇಲ್‌ ಬಳಿ ಆರೋಪಿಗಳಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಶುಕ್ರವಾರ ರಾತ್ರಿ 10.30ಕ್ಕೆ ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಅವರಲ್ಲಿ 3.90 ಲಕ್ಷ ರೂ. ಮೌಲ್ಯದ 17 ಗ್ರಾಂ ಬ್ರೌನ್‌ ಶುಗರ್‌ ಇರುವುದು ಪತ್ತೆಯಾಗಿದೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next