Advertisement
23 ವರ್ಷದ ಫಿಯೋನಾ ಫೆರೊ ಪಾಲಿಗೆ ಇದು 2ನೇ ಡಬ್ಲ್ಯುಟಿಎ ಪ್ರಶಸ್ತಿಯಾಗಿದೆ. ಇನ್ನೊಂದೆಡೆ ಕೊಂಟಾವೀಟ್ ತನ್ನ 6 ಫೈನಲ್ ಸ್ಪರ್ಧೆಗಳಲ್ಲಿ ಐದನ್ನು ಕಳೆದುಕೊಂಡ ಸಂಕಟ ಅನುಭವಿಸಿದರು.
ಈ ಗೆಲುವಿನೊಂದಿಗೆ ಫಿಯೋನಾ ಫೆರೊ ಮೊದಲ ಸಲ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ಟಾಪ್-50 ಯಾದಿಯಲ್ಲಿ ಕಾಣಿಸಿಕೊಂಡರು. ಸೋಮವಾರ ಬಿಡುಗಡೆಗೊಂಡ ನೂತನ ರ್‍ಯಾಂಕಿಂಗ್ ಯಾದಿಯಲ್ಲಿ ಅವರು 44ನೇ ಸ್ಥಾನದಲ್ಲಿದ್ದಾರೆ. ಇದು ಮಾರ್ಚ್ ಬಳಿಕ ನಡೆದ ಮೊದಲ ಟೆನಿಸ್ ಪಂದ್ಯಾವಳಿಯೆಂಬ ಹಿರಿಮೆಗೆ ಪಾತ್ರವಾಗಿತ್ತು. ಕೊರೊನಾ ಹಾವಳಿಯಿಂದಾಗಿ ಕಳೆದ 5 ತಿಂಗಳಿಂದ ಜಾಗತಿಕ ಟೆನಿಸ್ ಸ್ಥಗಿತಗೊಂಡಿತ್ತು.