Advertisement
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ ಅವರನ್ನು ಹಾಗೂ ಬೆಂಬಲಿಗರನ್ನು ಉಚ್ಛಾಟಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಪೊಲೀಸರ ಜತೆಗೆ ಸೇರಿ ಜೂ.23ರಂದು ನಡೆಯಬೇಕಾಗಿದ್ದ ಸಭೆಯನ್ನು ತಡೆಯಲು ಮುಂದಾಗಿದ್ದರೂ ಎಂದು ಟೀಕಿಸಿದ್ದಾರೆ.
ಉಚ್ಛಾಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ “ನಾನು ಪಕ್ಷದ 1.5 ಕೋಟಿ ಕಾರ್ಯಕರ್ತರಿಂದ ಸಮನ್ವಯಕಾರನಾಗಿ ಆಯ್ಕೆಯಾಗಿದ್ದೇನೆ. ಪಳನಿಸ್ವಾಮಿ ಮತ್ತು ಇತರ ಯಾರೇ ಆಗಿರಲಿ ನಾಯಕರು ನನ್ನನ್ನು ಉಚ್ಛಾಟಿಸಲು ಅಧಿಕಾರ ಹೊಂದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಇದೊಂದು ಏಕಪಕ್ಷೀಯ ನಿರ್ಣಯ ಎಂದು ಖಂಡಿಸಿದ, ಪನ್ನೀರ್‌ಸೆಲ್ವಂ ಪಳನಿಸ್ವಾಮಿ ಮತ್ತು ಅವರ ಬೆಂಬಲಿಗರನ್ನು ಉಚ್ಛಾಟಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ನಿರ್ಣಯದ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವುದಾಗಿ ಘೋಷಿಸಿದ್ದಾರೆ. ಬಣಗಳ ನಡುವೆ ಬಡಿದಾಟ
ಚೆನ್ನೈನ ರೋಯಪೇಟೈನಲ್ಲಿರುವ ಎಐಎಡಿಎಂಕೆಯ ಪ್ರಧಾನ ಕಚೇರಿಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಎರಡೂ ಬಣಗಳು ಹೊಡೆದಾಡಿಕೊಂಡಿವೆ ಮತ್ತು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿವೆ. ಈ ಎಲ್ಲ ಬೆಳವಣಿಗಳ ನಡುವೆ ಎಐಎಡಿಎಂಕೆಯ ಸಾಮಾನ್ಯ ಸಭೆ ನಡೆಯಿತು. ಜತೆಗೆ ಇಬ್ಬರು ನಾಯಕರು ಎಂಬ ನಿರ್ಣಯ ರದ್ದುಪಡಿಸಿ, ಪಳನಿಸ್ವಾಮಿ ಅವರನ್ನೇ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಂದು 2,500 ಮಂದಿ ಸದಸ್ಯರು ಇರುವ ಸಮಿತಿ ಏಕಕಂಠದಿಂದ ಒಪ್ಪಿಕೊಂಡಿದೆ. ಇಬ್ಬರು ನಾಯಕರು ಇದ್ದರೆ, ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಒಬ್ಬರೇ ನಾಯಕರು ಎಂಬ ತೀರ್ಮಾನಕ್ಕೆ ಬರಲಾಗಿದೆ ಕಾರ್ಯಕರ್ತರ ಹರ್ಷೋದ್ಗಾರದ ನಡುವೆ ಪ್ರಕಟಿಸಲಾಯಿತು.