Advertisement

ಆರೆಸ್ಸೆಸ್‌ ಪರ ಮುನಿಸ್ವಾಮಿ ಬ್ಯಾಟಿಂಗ್‌

03:33 PM Oct 12, 2022 | Team Udayavani |

ಕೋಲಾರ: ಆರೆಸ್ಸೆಸ್‌ ಒಂದು ರಾಷ್ಟ್ರಭಕ್ತರ ಸಂಘಟನೆಯಾಗಿದ್ದು, ಇದರ ವಿರುದ್ಧ ಮಾತನಾಡುವ ಯೋಗ್ಯತೆ ಇಲ್ಲದ ಎಸ್‌ಎಫ್‌ಐ ಅಥವಾ ಕಾಂಗ್ರೆಸ್ಸಿಗರು ಕಳೆದ 70 ವರ್ಷಗಳಿಂದ ಎಷ್ಟರಮಟ್ಟಿಗೆ ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂಬು ದನ್ನು ನೋಡಿ ಕೊಂಡು ಬಂದಿದ್ದೇವೆ ಎಂದು ಸಂಸದ ಎಸ್‌.ಮುನಿ ಸ್ವಾಮಿ ಕಿಡಿಕಾರಿದರು.

Advertisement

ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರೆಸ್ಸೆಸ್‌ ತರಬೇತಿ ಶಿಬಿರ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿ ಸಿದಂತೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿರುವ ಕುರಿತು ಜಿಲ್ಲಾಡಳಿತ ಭವನದಲ್ಲಿ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ದೇಶದ್ರೋಹಿ ಸಂಘಟನೆಗಳ ಜತೆಗೂಡುವ ವ್ಯಕ್ತಿಗಳ ಹೇಳಿಕೆಗಳಿಗೆ ಬೆಲೆ ಇಲ್ಲ ಎಂದರು.

ಎಸ್‌ಎಫ್‌ಐ ಅಥವಾ ಕಾಂಗ್ರೆಸ್‌ನವರಿಗಾಗಲಿ ದೇಶಪ್ರೇಮ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಕಳೆದ 70-75 ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ಎಸ್‌ಎಫ್‌ಐ ಕಾಂಗ್ರೆಸ್‌ ನ ಒಂದು ಭಾಗವಷ್ಟೆ, ಅವರಿಗೆ ದೇಶದ ಪರವಾಗಿ ಮಾತನಾಡಲು ಯೋಗ್ಯತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಫ್‌ಐ, ಎಸ್‌ಡಿಪಿಐ ನವರು ದೇಶದ್ರೋಹಿ ಚಟುವಟಿಕೆಗಳನ್ನು ಮಾಡಿದಾಗ ದೇಶದ ವಿವಿಧ ಜನಾಂಗದ ವ್ಯಕ್ತಿಗಳನ್ನು ಕೊಲೆ ಮಾಡಿದಾಗ, ಉಗ್ರಗಾಮಿ ಚಟುವಟಿಕೆಗಳನ್ನು ಮಾಡಿದಾಗ ಮಾತನಾಡುವುದಕ್ಕೆ ಇವರಿಗೆ ಬಾಯಿ ಇರಲಿಲ್ಲ. ಪಿಎಫ್‌ಐ, ಎಸ್‌ಡಿಪಿಐ ವಿಚಾರವಾಗಿ ಹ್ಯಾರಿಸ್‌ ಮಗ ನಲಪಾಡ್‌, ಕೆಲಸ ಕಾರ್ಯ ಇಲ್ಲದ ನಿರುದ್ಯೋಗಿಗಳು ಉಗ್ರಗಾಮಿ ಚಟುವಟಿಕೆಗಳನ್ನು ಮಾಡುತ್ತಾರೆ ಎಂದು ಹೇಳಿಕೆ ಕೊಟ್ಟಾಗ ಈ ಎಸ್‌ ಎಫ್‌ಐ ನವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. 70 ವರ್ಷ ದೇಶವನ್ನು ಆಳಿರುವ ಕಾಂಗ್ರೆಸ್‌ ನವರು ದೇಶದ ವಿವಿಧ ಭಾಗಗಳನ್ನು ಪಾಕಿಸ್ತಾನ, ಚೀನಾಗೆ ಬಿಟ್ಟುಕೊಟ್ಟರು, ಅಲ್ಲದೆ ಜಮ್ಮು ಕಾಶ್ಮೀರ ವಿಚಾರವಾಗಿ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ.ಯುವಕರಿಗೆ ದೇಶದ ಕುರಿತು ಅಭಿಮಾನ ಮೂಡಿಸುವ ಕೆಲಸವನ್ನು ಆರೆಸ್ಸೆಸ್‌ ತನ್ನ ತರಬೇತಿಗಳಲ್ಲಿ ಮಾಡುತ್ತದೆ, ಇದನ್ನು ಸಹಿಸಲು ಇವರಿಗೆ ಸಾಧ್ಯವಿಲ್ಲ ಎಂದು ಟೀಕಿಸಿದರು.

ಶಿಬಿರವನ್ನು ವಿರೋಧಿಸುತ್ತಿರುವ ಎಡಪಂಥೀಯರು, ಕೇರಳದಲ್ಲಿ ನಕ್ಸಲರನ್ನು ಹುಟ್ಟು ಹಾಕಿ ಹೋರಾಟಗಳನ್ನು ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಅಂತಹ ನಾಲಾಯಕ್‌ ಗಳಿಂದ ನಾವು ಬುದ್ಧಿ ಹೇಳಿಸಿಕೊಂಡು ದೇಶಪ್ರೇಮದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಕೆಜಿಎಫ್‌ ಕಮಲನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next