Advertisement

ಪಾಲಕ್ ಸೊಪ್ಪಿನಿಂದ ರುಚಿಕರವಾದ ತಿಂಡಿ-ತಿನಿಸು ಮಾಡೋ ಸುಲಭ ವಿಧಾನ ಇಲ್ಲಿದೆ…

09:52 AM Nov 08, 2019 | Sriram |

ಪಾಲಕ್ ಸೊಪ್ಪು ಹೆಚ್ಚು ಬಳಸುವುದರಿಂದ ಕ್ಯಾಲ್ಸಿಯಂನ ಕೊರತೆ ನಿವಾರಣೆಯಾಗುವುದು.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮ ದೇಹದ ಬೆಳವಣಿಗೆಗೆ ಇದು ಬಹಳ ಸಹಕಾರಿಯಾಗಿದೆ.

Advertisement

ಕಬ್ಬಿಣಾಂಶ, ಕ್ಯಾಲ್ಸಿಯಂ,ಮೆಗ್ನಿàಷಿಯಂ ಇತ್ಯಾದಿ ಹಲವಾರು ಉತ್ತಮ ಅಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪನ್ನು ಉಪಯೋಗಿಸಿ ಹಲವಾರು ಸವಿರುಚಿಗಳನ್ನು ತಯಾರಿಸಬಹುದು. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಪಾಲಕ್ ಪಕೋಡ ಹಾಗೂ ಪಾಲಕ್ ಪನ್ನೀರ್ ಮಂಚೂರಿ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿ ಸವಿಯಿರಿ…

ಪಾಲಕ್ ಪಕೋಡ
ಬೇಕಾಗುವ ಸಾಮಗ್ರಿ:
ಕಡಲೆ ಹಿಟ್ಟು 1 ಕಪ್, ಕಾನ್ಫ್ಲೋರ್ 1/2 ಕಪ್, ಮೆಣಸಿನ ಪುಡಿ 1ಚಮಚ, ಧನಿಯಾ ಪುಡಿ 1/2 ಚಮಚ, ಓಮ 1/4 ಚಮಚ, ಜೀರಿಗೆ 1/2 ಚಮಚ, ಪಾಲಕ್ ಸೊಪ್ಪು 1ಕಪ್ (ಸಣ್ಣಗೆ ಹಚ್ಚಿದ), ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ತಯಾರಿಸುವ ವಿಧಾನ:
ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿರಿ. ನಂತರ ಕಡಲೆ ಹಿಟ್ಟು ಕಾನ್ಫ್ಲೋರ್ ಮೆಣಸಿನ ಪುಡಿ , ಧನಿಯಾ ಪುಡಿ, ಓಮ, ಜೀರಿಗೆ, ಉಪ್ಪು ಮತ್ತು ಪಾಲಕ್ ಸೊಪ್ಪನ್ನು ಹಾಕಿ ಗಟ್ಟಿಗೆ ಕಲಸಿ. ನಂತರ ಕಾದ ಎಣ್ಣೆಗೆ ಕೈಯಿಂದ ಸ್ವಲ್ಪ ಸ್ವಲ್ಪನೇ ತೆಗೆದು ಹಾಕಿ. ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಗರಿ ಗರಿಯಾದ ಪಾಲಕ್ ಪಕೋಡ ಸವಿಯಲು ಸಿದ್ಧ.

ಪಾಲಕ್ ಪನ್ನೀರ್ ಮಂಚೂರಿ
ಬೇಕಾಗುವ ಸಾಮಗ್ರಿ:
ಪಾಲಕ್ ಸೊಪ್ಪು 1 ಕಟ್ಟು, ಪನ್ನೀರ್ 200 ಗ್ರಾಂ, ಕಾನ್ ಫ್ಲೋರ್ 1 ಚಮಚ, ಮೈದಾ 1ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಹೆಚ್ಚಿದ ಈರುಳ್ಳಿ 1/2 ಕಪ್, ಹೆಚ್ಚಿದ ಕ್ಯಾಬೇಜ್ 4 ಚಮಚ, ಸೋಯಾ, ಚಿಲ್ಲಿ ಸಾಸ್ 2 ಚಮಚ, ಟೊಮೆಟೋ ಸಾಸ್ 4 ಚಮಚ, ಹಸಿ ಮೆಣಸು 4, ಕೊತ್ತಂಬರಿ ಸೊಪ್ಪು 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು,.

ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಬೇಯಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿ ಇದಕ್ಕೆ ಮೈದಾ, ಕಾನ್ಫ್ಲೋರ್, ಶುಂಠಿ  ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ಕಲಸಿರಿ. ಈ ಮಿಶ್ರಣಕ್ಕೆ ಸಣ್ಣ ಸಣ್ಣ ಕತ್ತರಿಸಿದ ಪನ್ನೀರ್ ಹಾಕಿ ಡಿಪ್ ಮಾಡಿ ಎಣ್ಣೆಯಲ್ಲಿ ಕರಿದು ಮಂಚೂರಿ ತಯಾರಿಸಿಟ್ಟುಕೊಳ್ಳಿ.
ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ,ಈರುಳ್ಳಿ , ಹಸಿಮೆಣಸು, ಕ್ಯಾಬೇಜ್, ಸೋಯಾ, ಚಿಲ್ಲಿ ಸಾಸ್, ಟೊಮೆಟೋ ಸಾಸ್, ಉಪ್ಪು ಹಾಕಿ ಬಾಡಿಸಿಕೊಳ್ಳಿ. ನಂತರ ಕರಿದ ಮಂಚೂರಿಗಳನ್ನು ಇದಕ್ಕೆ ಸೇರಿಸಿ ಎರಡು ನಿಮಿಷ ಫ್ರೈ ಮಾಡಿದರೆ ಬಿಸಿ ಬಿಸಿಯಾದ ಪಾಲಕ್-ಪನ್ನೀರ್ ಮಂಚೂರಿ ರೆಡಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next