Advertisement

Seema Haider: ಆಕೆ 72 ಗಂಟೆಯೊಳಗೆ ದೇಶ ತೊರೆಯಬೇಕು;ಪಾಕ್ ಮಹಿಳೆಗೆ ಹಿಂದೂ ಸಂಘಟನೆ ಎಚ್ಚರಿಕೆ

03:57 PM Jul 17, 2023 | Team Udayavani |

ನವದೆಹಲಿ: ಪಬ್‌ ಜೀ ಮೂಲಕ ಪರಿಚಯವಾಗಿ ಪ್ರಿಯಕರಿನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್‌ ಹಿಂದೂ ಸಂಪ್ರದಾಯವನ್ನು ಅನುಸರಿಸಿ, ಇಲ್ಲಿನ ಆಚಾರ- ವಿಚಾರವನ್ನು ಆಳವಡಿಸಿಕೊಂಡಿದ್ದಾರೆ. ಇದು ನನ್ನ ಕುಟುಂಬ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

Advertisement

ಅತ್ತ ಪಾಕ್‌ ನಲ್ಲಿ ಸೀಮಾ ಅವರ ಕುಟುಂಬವೂ, ಇನ್ಮುಂದೆ ಸೀಮಾ ಇಲ್ಲಿಗೆ ಬರುವುದು ಬೇಡ ಅವಳು ಮುಸ್ಲಿಂ ಆಗಿ ಉಳಿದಿಲ್ಲ ಎಂದು ಹೇಳಿದೆ. ಇನ್ನೊಂದೆಡೆ ಗಂಡ ವಿಡಿಯೋ ಮೂಲಕ ಪತ್ನಿಯ ಬರುವಿಕೆಗಾಗಿ ಮನವಿ ಮಾಡಿದ್ದಾರೆ.

ಭಾರತೀಯ ಹಿಂದೂ ಸಂಪ್ರದಾಯ ಮಹಿಳೆಯಂತೆ ಬದುಕುತ್ತಿರುವ ಸೀಮಾ ಹೈದರ್‌ ಗೆ ಈಗ ಹಿಂದೂ ಸಂಘಟನೆಯೊಂದು ದೇಶ ಬಿಡಲು ಎಚ್ಚರಿಕೆಯನ್ನು ನೀಡಿದೆ.

ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿಕೆಯಾಗಿರಬಹುದು ಮತ್ತು ದೇಶಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಗೋ ರಕ್ಷಾ ಹಿಂದೂ ದಳದ  ರಾಷ್ಟ್ರೀಯ ಅಧ್ಯಕ್ಷ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ನಾವು ದೇಶದ್ರೋಹಿ ರಾಷ್ಟ್ರದ ಮಹಿಳೆಯನ್ನು ಸಹಿಸುವುದಿಲ್ಲ. 72 ಗಂಟೆಗಳಲ್ಲಿ ಸೀಮಾ ಹೈದರ್ ದೇಶ ತೊರೆಯದಿದ್ದರೆ ಆಂದೋಲನ ಆರಂಭಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಘಟನೆ ಹಿನ್ನೆಲೆ: ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಜನಪ್ರಿಯ ಮೊಬೈಲ್‌ ಗೇಮ್‌ ಪಬ್‌ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದರು. ಆ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದು, ಆಕೆ ಪಾಕಿಸ್ತಾನ ಮೂಲದವಳು ಆಗಿದ್ದಾಳೆ ಎನ್ನುವುದು ಅರಿತುಕೊಂಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್‌ ಮಾಡತೊಡಗಿದ್ದರು. ಹಲವು ಸಮಯದಿಂದ ಪಬ್‌ ಜೀ ಗೇಮ್‌ ಆಡುತ್ತಾ ಮೆಸೇಜ್‌ ಮಾಡಿದ ಸಚಿನ್‌ ಗೆ  ಪಾಕ್‌ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಗುಲಾಮ್ ಹೈದರ್ ಯೊಂದಿಗೆ ಪ್ರೇಮಾಂಕುರ ಆಗಿದೆ. ಅತ್ತ ಕಡೆಯಿಂದ ಸೀಮಾ ಕೂಡ ಸಚಿನ್‌ ನನ್ನು ಪ್ರೀತಿಸ ತೊಡಗಿದ್ದರು. ಇದಾದ ಬಳಿಕ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ನೇಪಾಳದ ಮೂಲಕ ಭಾರತಕ್ಕೆ ಬಂದು ಸಚಿನ್‌ ಇರುವ ಗ್ರೇಟರ್‌ ನೋಯ್ಡಾಕ್ಕೆ ಬಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next