Advertisement

ದುಬೈನಲ್ಲಿ ಮುಶರಫ್ ಹೇಳಿಕೆ ದಾಖಲಿಸಲು ಪಾಕ್‌ ಕೋರ್ಟ್‌ ಆದೇಶ

04:54 PM Oct 15, 2018 | Team Udayavani |

ಇಸ್ಲಾಮಾಬಾದ್‌ : ದೇಶ ದ್ರೋಹ ಆರೋಪದ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ತನ್ನ ಹೇಳಿಕೆ ದಾಖಲಿಸಲು ನಿರಾಕರಿಸಿರುವ ಪಾಕಿಸ್ಥಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ, 75ರ ಹರೆಯದ ಪರ್ವೇಜ್‌ ಮುಶರಫ್  ಅವರ ಹೇಳಿಕೆಯನ್ನು ದುಬೈನಲ್ಲಿ ದಾಖಲಿಸಿಕೊಳ್ಳಲು ಉನ್ನತ ಮಟ್ಟದ ನ್ಯಾಯಾಂಗ ಆಯೋಗವೊಂದನ್ನು ರೂಪಿಸುವಂತೆ ಪಾಕಿಸ್ಥಾನದಲ್ಲಿನ ವಿಶೇಷ ನ್ಯಾಯಾಲಯವೊಂದು ಇಂದು ಆದೇಶಿಸಿತು.

Advertisement

ಮುಶರಫ್ ಅವರು 2016ರ ಮಾರ್ಚ್‌ ನಿಂದ ದುಬೈ ನಲ್ಲಿ ವಾಸವಾಗಿದ್ದಾರೆ. 2007ರಲ್ಲಿ ದೇಶದ ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿರುವ ಅವರ ವಿರುದ್ಧ ದೇಶ ದ್ರೋಹದ ಪ್ರಕರಣ 2007ರಲ್ಲಿ  ದಾಖಲಾಗಿತ್ತು ಮತ್ತು 2014ರಲ್ಲಿ ಅವರನ್ನು ದೋಷಿ ಎಂದು ಸಾರಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next