Advertisement
ಗಂಗೊಳ್ಳಿ – ತ್ರಾಸಿ ಮುಖ್ಯ ರಸ್ತೆಯ ಕೊಡಪಾಡಿ ಬಸ್ ನಿಲ್ದಾಣ ಬಳಿಯಿಂದ ಪಕ್ಕಿನಹಾಡಿಗೆ ಸಂಚರಿಸುವ ರಸ್ತೆ ಇದಾಗಿದ್ದು, ಸುಮಾರು 1 ಕಿ.ಮೀ. ದೂರದವರೆಗೆ ಮಣ್ಣಿನ ರಸ್ತೆಯಿದ್ದು, ಈಗ ಮಳೆಗೆ ತುಂಬಾ ಹಾನಿಯಾಗಿದೆ.
Related Articles
Advertisement
ಇನ್ನು ಇಲ್ಲಿನ ರಸ್ತೆ ಅವ್ಯವಸ್ಥೆಯಿಂದ ಬೇಸತ್ತ ಗ್ರಾಮಸ್ಥರು, ಗುಜ್ಜಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದು, ಶಾಲೆಗೆ ಹೋಗುವ ಮಕ್ಕಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆಯನ್ನು ದುರಸ್ತಿ ಮಾಡಿ, ಮಳೆ ನೀರು ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲೂ ಚರಂಡಿ ನಿರ್ಮಿಸಿ. ಈ ಮಣ್ಣಿನ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎನ್ನುವುದಾಗಿ ಪಕ್ಕಿನಹಾಡಿ ಭಾಗದ ಗ್ರಾಮಸ್ಥರು ಗ್ರಾ.ಪಂ.ಗೆ ಮನವಿ ಮಾಡಿಕೊಂಡಿದ್ದಾರೆ.
ಮಳೆಗಾಲ ಮುಗಿಯಲಿ
ಪಕ್ಕಿನಹಾಡಿ- ಕಂಚುಗೋಡು ರಸ್ತೆಯ ಮಳೆಗೆ ಹದಗೆಟ್ಟ ಬಗ್ಗೆ ಗಮನಕ್ಕೆ ಬಂದಿದ್ದು, ಅಲ್ಲಿನ ವಾರ್ಡ್ ಸದಸ್ಯರಲ್ಲಿಯೂ ಮಾತನಾಡಿದ್ದೇನೆ. ಮಳೆ ಕಡಿಮೆಯಾದ ಕೂಡಲೇ ಪಂಚಾಯತ್‌ನಿಂದ ಮಳೆ ನೀರು ಸರಾಗ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುವುದು. ಇದಲ್ಲದೆ ಸದ್ಯ ಸಂಚರಿಸಲು ಅನುಕೂಲವಾಗುವಂತಹ ವ್ಯವಸ್ಥೆ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೆ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲಾಗುವುದು.
– ತಮ್ಮಯ್ಯ ದೇವಾಡಿಗ, ಅಧ್ಯಕ್ಷರು, ಗುಜ್ಜಾಡಿ ಗ್ರಾ.ಪಂ.
20ಕ್ಕೂ ಮಿಕ್ಕಿ ಮನೆ
15-20 ಮನೆಯವರು ಇದೇ ರಸ್ತೆಯನ್ನೇ ಆಶ್ರಯಿಸಿದ್ದಾರೆ. ಶಾಲೆಗೆ ಹೋಗುವ ಮಕ್ಕಳು, ಪೇಟೆ, ಕೆಲಸಕ್ಕೆ ಹೋಗುವ ಮಹಿಳೆಯರು, ಹಾಲಿನ ಡೇರಿಗೆ ಹೋಗುವ ಊರವರೆಲ್ಲ ನಿತ್ಯ ಈ ಕೆಸರುಮಯ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿ ದ್ದಾರೆ. ಮಳೆ ಬರುವಾಗಲಂತೂ ನಡೆದುಕೊಂಡು ಹೋಗಲು ಸಾಧ್ಯವಿಲ್ಲದಂತಾಗಿದೆ.