Advertisement

ಮಾರುಕಟ್ಟೆಯಲ್ಲಿ ಸ್ಫೋಟ; 13 ಮಂದಿಗೆ ಗಾಯ

08:25 AM Dec 20, 2022 | Team Udayavani |

ಇಸ್ಲಾಮಾಬಾದ್: ಮಾರುಕಟ್ಟೆಯೊಂದರಲ್ಲಿ ಸ್ಫೋಟ ಸಂಭವಿಸಿ ಸುಮಾರು 13 ಜನರು ಗಾಯಗೊಂಡಿರುವ ಘಟನೆ ಬಲೂಚಿಸ್ತಾನ್ ಪ್ರಾಂತ್ಯದ ಖುಸ್ದಾರ್‌ ಜಿಲ್ಲೆಯಲ್ಲಿ  ಡಿ.19 ರಂದು ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಮಾರುಕಟ್ಟೆಯಲ್ಲಿ ನಿಲ್ಲಿಸಲಾಗಿದ್ದ ಮೋಟಾರ್ ಸೈಕಲ್‌ಗೆ ಸ್ಫೋಟಕಗಳನ್ನು ಅಳವಡಿಸಲಾಗಿದ್ದು, ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದು, ರಾತ್ರಿ ಸಮಯವಾಗಿದ್ದರಿಂದ ಆ ಪ್ರದೇಶದ ಸುತ್ತಮುತ್ತ ಕಡಿಮೆ ಜನರಿದ್ದರಿಂದ ಹಾಗೂ ಈ ಸಮಯಕ್ಕೆ ಹೆಚ್ಚಿನ ಅಂಗಡಿಗಳು ಮುಚ್ಚಲ್ಪಟ್ಟಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next