Advertisement

ಪಾಕ್‌ ಪಟ್ಟಿಯಲ್ಲಿ 4000 ಉಗ್ರರ ಹೆಸರು ಡಿಲೀಟ್‌: ಕಪ್ಪು ಪಟ್ಟಿ ಸೇರುವ ಭಯದಿಂದ ಈ ಕುತಂತ್ರ

10:16 AM Apr 22, 2020 | mahesh |

ಹೊಸದಿಲ್ಲಿ: ಆರ್ಥಿಕವಾಗಿ ದಯನೀಯ ಸ್ಥಿತಿಗೆ ತಲುಪಿರುವ ಪಾಕ್‌, ವಿಶ್ವ ಸಹಾಯ ಧನದ ಆಸೆಗಾಗಿ, ತನ್ನ ಪಟ್ಟಿಯಿಂದ 4000 ಉಗ್ರರ ಹೆಸರನ್ನೇ ಕೈಬಿಟ್ಟಿದೆ. 2008ರ ಮುಂಬಯಿ ದಾಳಿಯಲ್ಲಿ ಪ್ರಮುಖ ಪಾತ್ರವ ಹಿಸಿದ್ದ ಝಾಕಿ ಉರ್‌ ರೆಹಮಾನ್‌ ಲಖ್ವಿಯ ಹೆಸರೂ ಪಟ್ಟಿಯಿಂದ ಮಾಯವಾಗಿದೆ!

Advertisement

ಉಗ್ರರ ಹಣಕಾಸು ವ್ಯವಹಾರಕ್ಕೆ ಕಡಿವಾಣ ಹಾಕಲು, ಹಣಕಾಸು ಕ್ರಿಯಾಪಡೆ (ಎಫ್ಎಟಿಎಫ್) ಪ್ರತಿ ದೇಶದಿಂದ ಪಟ್ಟಿ ಪಡೆಯುತ್ತದೆ. ಅತಿ ಹೆಚ್ಚು ಉಗ್ರರ ಪಟ್ಟಿ (7,600) ಹೊಂದಿದ್ದ ಪಾಕ್‌ಗೆ, ಈ ಹಿಂದೆ ಖಡಕ್‌ ಸೂಚನೆ ನೀಡಲಾಗಿತ್ತು. ಉಗ್ರರಿಗೆ ಕಡಿವಾಣ ಹಾಕದಿದ್ದರೆ, ಉಗ್ರರಿಗೆ ಹಣ ಪೂರೈಕೆ ನಿಲ್ಲಿಸದಿದ್ದರೆ, ಕಂದು ಪಟ್ಟಿಯಲ್ಲಿ ರುವ ಪಾಕ್‌ ಅನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿಯೂ ಎಚ್ಚರಿಸಿತ್ತು. ಈಗಾಗಲೇ ಇರಾನ್‌, ಉತ್ತರ ಕೊರಿಯಾ ಕಪ್ಪು ಪಟ್ಟಿಯಲ್ಲಿವೆ.

ಉಗ್ರರ ಪಟ್ಟಿಯ ಮೇಲೆ ಸದಾ ಕಣ್ಣಿಡುವ ನ್ಯೂಯಾರ್ಕ್‌ ಮೂಲದ ಕ್ಯಾಸ್ಟೆಲಮ್‌ನ ವರದಿಯಂತೆ, ಸಾರ್ವಜನಿಕ ಪ್ರಕಟನೆ- ವಿವರಣೆಗಳನ್ನು ನೀಡದೆ, ಪಾಕ್‌ ಏಕಾಏಕಿ 4,000 ಹೆಸರುಗಳನ್ನು ಕೈಬಿಟ್ಟಿದೆ. ಮಾ. 9ರಿಂದ ಮಾ. 27ರ ನಡುವಿನ ಅವಧಿಯಲ್ಲಿ 1,069 ಉಗ್ರರ ಹೆಸರುಗಳನ್ನು ಕೈಬಿಡಲಾಗಿದೆ. ಮಾ. 27ರ ಅನಂತರ ಮತ್ತೆ 800 ಹೆಸರುಗಳನ್ನು ಡಿಲೀಟ್‌ ಮಾಡಿದೆ. ಅಲ್ಲದೆ, ಪಟ್ಟಿಯಲ್ಲಿರುವ ಅನೇಕ ಹೆಸರುಗಳಲ್ಲಿ ಗೊಂದಲದ ದಾಖಲೆಗಳನ್ನು ನೀಡಿದೆ. ಜಗತ್ತಿನ ಕಣ್ಣಿಗೆ ಕುಖ್ಯಾತಿ ಆಗಿದ್ದ ಝಾಕಿ ಉರ್‌ ರೆಹಮಾನ್‌ ಲಖ್ವಿ ಹೆಸರು ಕೂಡ ಝಾಕಿ ಉರ್‌ ರೆಹಮಾನ್‌ ಅಂತ ನೀಡ ಲಾಗಿದೆ. ಸಲ್ಲಿಸಿರುವ ಐಡಿಗಳಿಗೆ ತಾಳೆಯೇ ಸಿಗುತ್ತಿಲ್ಲ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next