Advertisement

ಸೀಮಾ ಹೈದರ್, ಪ್ರಿಯಕರ ಸಚಿನ್ ನನ್ನು 10 ಗಂಟೆ ವಿಚಾರಣೆ ನಡೆಸಿದ ಎಟಿಎಸ್ ಅಧಿಕಾರಿಗಳು

09:49 AM Jul 18, 2023 | Team Udayavani |

ಲಕ್ನೋ: ಪಬ್ಜಿ ಆಟದಲ್ಲಿ ಪರಿಚಯವಾಗಿ ಬಳಿಕ ಪ್ರೇಮಕ್ಕೆ ತಿರುಗಿ ಪಾಕಿಸ್ತಾನದಿಂದ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹಾಗೂ ಪ್ರಿಯಕರ ಸಚಿನ್ ಮತ್ತು ಸಚಿನ್ ತಂದೆ ನೇತ್ರಪಾಲ್ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿ, ರಾತ್ರಿ 10.30 ರ ಸುಮಾರಿಗೆ ಮೂವರನ್ನೂ ಅಧಿಕಾರಿಗಳ ತಂಡ ನೋಯ್ಡಾದಿಂದ ದೆಹಲಿಗೆ ಕರೆದೊಯ್ದಿದ್ದಾರೆ.

Advertisement

ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ಬಂದ ಸೀಮಾ ಹೈದರ್ 50 ದಿನಗಳ ಕಾಲ ರಬೂಪುರದಲ್ಲಿ ತಂಗಿರುವ ಬಗ್ಗೆ ಗೌತಮ್ ಬುಧ್ ನಗರ ಪೊಲೀಸರು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಪತ್ರ ಬರೆದಿತ್ತು. ಎಟಿಎಸ್ ಮೊದಲಿನಿಂದಲೂ ಈ ವಿಷಯದ ಮೇಲೆ ಕಣ್ಣಿಟ್ಟಿತ್ತು. ಸೀಮಾ ಹೈದರ್ ಬೇಹುಗಾರಿಕೆಗಾಗಿ ಪ್ರೇಮದ ನೆಪದಲ್ಲಿ ಭಾರತಕ್ಕೆ ಬಂದಿದ್ದಾಳೆಯೇ ಅಥವಾ ಯಾವುದಾದರೂ ದುರುದ್ದೇಶದಿಂದ ಭಾರತಕ್ಕೆ ಬಂದಿದ್ದಾಳೆಯೇ ಎಂಬುದನ್ನು ಪತ್ತೆ ಹಚ್ಚಲು ಎಟಿಎಸ್ ಪ್ರಯತ್ನಿಸುತ್ತಿದೆ.

ಸೀಮಾ ಗೂಢಾಚಾರಿಯೇ, ಆಕೆಗೆ ಐಎಸ್‌ಐ ಜೊತೆ ಸಂಪರ್ಕವಿದೆಯೇ ಅಥವಾ ಆಕೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾಳೆಯೇ? ಎಟಿಎಸ್ ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ದೆಹಲಿಯಿಂದ ಐಬಿ ತಂಡ ಜಿಲ್ಲೆಗೆ ಆಗಮಿಸಿದ್ದು, ತಂಡ ಸೀಮಾ ಹೈದರ್ ಬಗ್ಗೆ ತನಿಖೆ ನಡೆಸಿತ್ತು.

ಸಚಿನ್ ಮತ್ತು ಆತನ ತಂದೆ ನೇತ್ರಪಾಲ್ ಸಿಂಗ್ ಅವರನ್ನೂ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಂಸ್ಥೆಗಳ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ಎಟಿಎಸ್, ಲಖನೌದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಶಂಕಿತ ಏಜೆಂಟ್ ಅನ್ನು ಬಂಧಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದ್ದು ಅಧಿಕಾರಿಗಳು ಮತ್ತಷ್ಟು ಎಚ್ಚರದಿಂದ ಇರುವಂತೆ ಮಾಡಿದೆ.

ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್, ಪಬ್ಜಿ ಗೇಮ್ ಆಡುವ ಮೂಲಕ ಭಾರತದ ಸಚಿನ್ ಮೀನಾ ಜತೆ ಪ್ರೇಮಾಂಕುರವಾಗಿತ್ತು. ಅದೇ ಕಾರಣಕ್ಕಾಗಿ ಆಕೆ, ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದು ಇದೀಗ ಭಾರಿ ಚರ್ಚೆಯ ವಿಷಯವಾಗಿದೆ.

Advertisement

ಇದನ್ನೂ ಓದಿ: Jharkhand: ಅಧಿಕಾರಕ್ಕೆ ಬಂದ ಮೊದಲ ದಿನವೇ ಲಂಚಕ್ಕೆ ಬೇಡಿಕೆ ಇಟ್ಟ ಮಹಿಳಾ ಅಧಿಕಾರಿ…

Advertisement

Udayavani is now on Telegram. Click here to join our channel and stay updated with the latest news.

Next