Advertisement

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

03:34 PM Jun 15, 2024 | Team Udayavani |

ತಿರುವನಂತಪುರಂ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶ್ಯೂರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಗೆಲುವು ಸಾಧಿಸಿ, ಕೇಂದ್ರ ಸಚಿವ ಸ್ಥಾನ ಪಡೆದಿರುವ ಸುರೇಶ್ ಗೋಪಿ ಅವರು ಇದೀಗ ತನ್ನ ಹೇಳಿಕೆಗಳಿಂದ ಪ್ರಚಾರ ಪಡೆಯುತ್ತಿದ್ದಾರೆ.

Advertisement

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ‘ಮದರ್ ಇಂಡಿಯಾ’ ಎಂದು ಕರೆದಿರುವ ಸುರೇಶ್ ಗೋಪಿ ಅವರು, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನ ಕೆ.ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದಿದ್ದಾರೆ.

ಅಲ್ಲದೆ ಕರುಣಾಕರನ್ ಮತ್ತು ಹಿರಿಯ ಮಾರ್ಕ್ಸ್ ವಾದಿ ಇ.ಕೆ ನಾಯನರ್ ಅವರನ್ನು ತನ್ನ ರಾಜಕೀಯ ಗುರುಗಳು ಎಂದಿದ್ದಾರೆ.

ಇಲ್ಲಿನ ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ “ಮುರಳಿ ಮಂದಿರಂ” ಗೆ ಭೇಟಿ ನೀಡಿದ ನಂತರ ಸುರೇಶ್ ಗೋಪಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಶೇಷ ಎಂದರೆ ಏಪ್ರಿಲ್ 26 ರಂದು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ಕರುಣಾಕರನ್ ಅವರ ಪುತ್ರ ಮತ್ತು ಕಾಂಗ್ರೆಸ್ ಮುಖಂಡ ಕೆ ಮುರಳೀಧರನ್ ಅವರನ್ನು ಸೋಲಿಸಿ ಸುರೇಶ್ ಗೋಪಿ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಕೆ ಮುರಳೀಧರನ್ ಅವರು ಮೂರನೇ ಸ್ಥಾನ ಗಳಿಸಿದ್ದರು.

Advertisement

ಕರುಣಾಕರನ್ ಸ್ಮಾರಕಕ್ಕೆ ಅವರ ಭೇಟಿಗೆ ಯಾವುದೇ ರಾಜಕೀಯ ಅರ್ಥವನ್ನು ಸೇರಿಸಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಒತ್ತಾಯಿಸಿದ ಬಿಜೆಪಿ ನಾಯಕ ಗೋಪಿ, ತಮ್ಮ “ಗುರುಗಳಿಗೆ” ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಇಂದಿರಾ ಗಾಂಧಿ ಅವರನ್ನು ಭಾರತದ ಮಾತೆ ಎಂದು ಕರೆದ ಸುರೇಶ್ ಗೋಪಿ ಅವರು, ಕರುಣಾಕರನ್ ಅವರನ್ನು ಕೇರಳದ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದು ಕರೆದರು.

Advertisement

Udayavani is now on Telegram. Click here to join our channel and stay updated with the latest news.

Next