ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲೀಗ ಇಂಧನ ಇಲ್ಲದ ಪರಿಣಾಮ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗದ 48 ವಿಮಾನಗಳ ಹಾರಾಟವನ್ನು ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ (PIA) ರದ್ದುಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:LEO ಸಿನಿಮಾ ನೋಡಿ ದೊಡ್ಡ ಸುಳಿವು ಬಿಟ್ಟುಕೊಟ್ಟ ಉದಯನಿಧಿ ಸ್ಟಾಲಿನ್
ಇಂಧನ ಸರಬರಾಜು ವ್ಯತ್ಯಯಗೊಂಡ ಪರಿಣಾಮ ದಿನಂಪ್ರತಿ ಹಾರಾಟದ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ವಿಮಾನ ಸಂಚಾರದ ಸಮಯವನ್ನು ನಿಗದಿಗೊಳಿಸುವುದಾಗಿ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ನ ವಕ್ತಾರ ದ ಡಾನ್ ಪತ್ರಿಕೆಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇಂಧನ ಇಲ್ಲದ ಕಾರಣದಿಂದಾಗಿ 13 ದೇಶೀಯ ವಿಮಾನಗಳು ಹಾಗೂ 11 ಅಂತಾರಾಷ್ಟ್ರೀಯ ಮಾರ್ಗದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ರದ್ದುಗೊಳಿಸಿದ ವಿಮಾನಗಳ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡುವುದಾಗಿ ಪಿಐಎ ಹೇಳಿದೆ.
ವಿಮಾನ ಹಾರಾಟ ರದ್ದುಗೊಳಿಸಿದ್ದರಿಂದ ಪ್ರಯಾಣಿಕರು ಪಿಐಎ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದೆ.