ಇಸ್ಲಾಮಾಬಾದ್: ಭಾರತದ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎಂಬ ಸುದ್ದಿಯ ಬೆನ್ನಲ್ಲೇ ಪಾಕಿಸ್ತಾನ ಸಿಂಧ್ ಪರೀಕ್ಷಾ ಕೇಂದ್ರದಿಂದ ಉಡಾಯಿಸಿದ ಮಿಸೈಲ್ ತನ್ನ ಗುರಿ ತಲುಪದೇ ವಿಫಲವಾಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ:ಕೋರ್ಟ್ ತೀರ್ಪಿನ ನಂತರ ಪ್ರತಿಭಟನೆ ಸರಿಯಲ್ಲ: ಜಗದೀಶ ಶೆಟ್ಟರ್
ಗುರುವಾರ (ಮಾರ್ಚ್ 17) ಬೆಳಗ್ಗೆ 11ಗಂಟೆಗೆ ಸಿಂಧ್ ಪ್ರದೇಶದಲ್ಲಿ ಕ್ಷಿಪಣಿಯನ್ನು ಪರೀಕ್ಷಿಸಲು ಸಮಯ ನಿಗಡಿಪಡಿಸಿತ್ತು. ಟ್ರಾನ್ಸ್ ಪೋರ್ಟರ್ ಎರೆಕ್ಟರ್ ಲಾಂಚರ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕ್ಷಿಪಣಿ ಉಡಾವಣೆಯನ್ನು ಮುಂದೂಡಿತ್ತು ಎಂದು ವರದಿ ವಿವರಿಸಿದೆ.
ಆದರೆ ಮಧ್ಯಾಹ್ನ ಪರೀಕ್ಷಾರ್ಥ ಕ್ಷಿಪಣಿಯನ್ನು ಉಡಾಯಿಸಿದ ಕೆಲವೆ ಕ್ಷಣದಲ್ಲಿ ತನ್ನ ಗುರಿ ತಲುಪದೇ ಸಿಂಧ್ ನ ಥಾನಾ ಬುಲಾ ಖಾನ್ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಸುದ್ದಿಯನ್ನು ಪಾಕಿಸ್ತಾನದ ನ್ಯೂಸ್ ಚಾನೆಲ್ ಗಳು ಪ್ರಸಾರ ಮಾಡಿದ್ದರೂ ಕೂಡಾ ಪಾಕಿಸ್ತಾನದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದೆ.
ಮತ್ತೊಂದೆಡೆ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಆಡಳಿತಾಧಿಕಾರಿಗಳು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದು, ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.