Advertisement

15 ದಿನಗಳೊಳಗೆ ಕಾಶ್ಮೀರ, ಪಂಜಾಬ್‌ನಲ್ಲಿ ಐಎಸ್‌ಐ ಉಗ್ರ ದಾಳಿ: ವರದಿ

03:53 PM Jun 10, 2017 | Team Udayavani |

ಹೊಸದಿಲ್ಲಿ : ಪಾಕಿಸ್ಥಾನದ ಬೇಹು ಸಂಸ್ಥೆ ಐಎಸ್‌ಐ ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ ನಲ್ಲಿ ಭಾರೀ ದೊಡ್ಡ ಉಗ್ರ ದಾಳಿ ನಡೆಸಲು ಯೋಜಿಸುತ್ತಿದೆ; ಇದಕ್ಕಾಗಿ ನಾಲ್ವರು ಉಗ್ರರು ಪಂಜಾಬ್‌ ಗಡಿ ಮೂಲಕ ದೇಶದೊಳಗೆ ನುಸುಳಿ ಬಂದಿದ್ದಾರೆ ಎಂದು ಭಾರತೀಯ ಗುಪ್ತಚರ ದಳ, ರಾಜ್ಯ ಸರಕಾರಗಳೊಂದಿಗೆ ಹಂಚಿಕೊಂಡಿರುವ ವರದಿಯು ತಿಳಿಸಿದೆ. 

Advertisement

ಮುಂದಿನ ಹದಿನೈದು ದಿನಗಳ ಒಳಗೆ ಜಮ್ಮು ಸಮೀಪದ ಕಥುವಾ, ಪಂಜಾಬ್‌ ನಲ್ಲಿನ ಗುರುದಾಸ್‌ಪುರ ಮತ್ತು ಪಠಾಣ್‌ಕೋಟ್‌ನಲ್ಲಿ  ಪಾಕ್‌ ಐಎಸ್‌ಐ ಆಯೋಜಿತ ಉಗ್ರ ದಾಳಿಗಳು ನಡೆಯುವ ಸಂಭವವಿದೆ; ಈ ಬಗ್ಗೆ ಸಾಕಷ್ಟು ಮುಂಜಾಗ್ರತೆ ಅಗತ್ಯ ಎಂದು ಗುಪ್ತಚರ ವರದಿ ತಿಳಿಸಿದೆ.  ಗುಪ್ತಚರ ದಳದ ಈ ವರದಿಯ ಪ್ರತಿಯೊಂದು ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ದೊರಕಿದೆ.

ಕೆಲವು ದಿನಗಳ ನಾಲ್ಕು ಪಾಕ್‌ ಉಗ್ರರು ಪಂಜಾಬ್‌ ಗಡಿ ಮೂಲಕ ಬಮ್‌ತಾಲ್‌ ವಲಯದೊಳಗೆ ನುಸುಳಿ ಬಂದಿದ್ದಾರೆ; ಇವರು ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ ನಲ್ಲಿ ಭಾರೀ ದೊಡ್ಡ ಉಗ್ರ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಈ ವಾರದ ಆದಿಯಲ್ಲೇ ರಾಜ್ಯ ಸರಕಾರಗಳಿಗೆ ಮುನ್ನೆಚ್ಚರಿಕೆ ನೀಡಿದೆ. 

ಪಂಜಾಬ್‌ ನಲ್ಲೀಗ ಅಡಗಿಕೊಂಡಿರುವ ಈ ಉಗ್ರರು ಪಾಕಿಸ್ಥಾನದಿಂದ ತಮಗೆ ಶಸ್ತ್ರಾಸ್ತ್ರಗಳು ಪೂರೈ ಕೆಯಾಗುವುದನ್ನೇ ಕಾಯುತ್ತಿದ್ದಾರೆ; ಮಾದಕ ದ್ರವ್ಯ ಕಳ್ಳಸಾಗಣೆದಾರನೋರ್ವನನ್ನು ಪಾಕ್‌ ಐಎಸ್‌ಐ ಕೊರಿಯರ್‌ ಆಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next